ವರದಿ ರಾಯಿ ರಾಜ ಕುಮಾರ
ಪವರ್ ಫ್ರೆಂಡ್ಸ್ ಬೆದ್ರ, ದ ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ನವೆಂಬರ್ 16 ರಂದು ಮೂಡುಬಿದರೆ ಕನ್ನಡ ಭವನದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ, ಆಧಾರ್ ನೋಂದಣಿ, ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮಾ ಶಿಬಿರ ನಡೆಯಿತು.

ಪುತ್ತೂರು ಅಂಚೆ ಇಲಾಖೆಯ ನೂತನ್ ಬಂಗೇರ ಅವರು ಸುಮಾರು 10 ಕಂಪ್ಯೂಟರ್ ಕೇಂದ್ರಗಳ ಮೂಲಕವಾಗಿ ಅತ್ಯುತ್ತಮವಾದಂತಹ ವ್ಯವಸ್ಥೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಯಮಿ ಶ್ರೀಪತಿ ಭಟ್ ದೀಪ ಬೆಳಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ ಜೆ ಪಿ ದಾಖಲೆ ಮಾಜಿ ಅಧ್ಯಕ್ಷ ಸುದರ್ಶನ್ ನೇಮ್ ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ಮೋದಿಯವರ ಮುತುವರ್ಜಿಯಿಂದ ಅಂಚೆ ಕಛೇರಿಗಳು ಹಿಂದಿನಂತೆಯೇ ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸಲು ಸಾಧ್ಯವಾಗಿದೆ. ಆರೋಗ್ಯ ಇನ್ನಿತರ ಎಲ್ಲಾ ಸೌಲಭ್ಯಗಳು ಅಂಚೆ ಇಲಾಖೆಯ ಮೂಲಕ ಬಡವರ್ಗವನ್ನು ತಲುಪಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಪುತ್ತೂರು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಅವರು ಬಹಳ ಮುತ್ತು ಅರ್ಜಿಯಿಂದ ಬಡವರು ಹಾಗೂ ನಿರ್ಗತಿಕರ ಬಳಿಗೆ ಹೋಗಿ ಅಂಚೆ ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.

ವೇದಿಕೆಯಲ್ಲಿ ಶಾಮಿಯಾನ ಸಂಘದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್,ವಕೀಲ ಶರತ್ ಶೆಟ್ಟಿ, ಅಬುಲಾಲ್ ಪುತ್ತಿಗೆ ಉಪಸ್ಥಿತರಿದ್ದರು.
.

