ಉಡುಪಿಯ ಬೇಳೂರು, ದೇಲಟ್ಟು ಗ್ರಾಮದ ಪುಟ್ಟ ಬಾಲಕ ಪ್ರದ್ಯುಮ್ನ ಅಡಿಗಗೆ ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ ಜಾಗತಿಕ ಗೌರವ

0
124

​ಉಡುಪಿ : ಬೇಳೂರು, ದೇಲಟ್ಟು ಗ್ರಾಮದ ಪದ್ಮರಾಜ ಅಡಿಗ ಹಾಗೂ ಪದ್ಮಿನಿ ಅಡಿಗ ದಂಪತಿಯ ಪುತ್ರ, ಪುಟಾಣಿ ಪ್ರದ್ಯುಮ್ನ ಅಡಿಗ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅಸಾಧಾರಣ ಜ್ಞಾಪಕ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ‘ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಜಾಗತಿಕ ದಾಖಲೆ ಬರೆದಿದ್ದಾನೆ. ಈ ಸಾಧನೆಗಾಗಿ ಸಂಸ್ಥೆಯು ಮಗುವಿಗೆ “SUPER TALENTED KID” ಎಂಬ ಬಿರುದನ್ನು ನೀಡಿ ಗೌರವಿಸಿದೆ.

​ಕೇವಲ 1 ವರ್ಷ 7 ತಿಂಗಳ ವಯಸ್ಸಿನ ಪ್ರದ್ಯುಮ್ನ, ಪ್ರಾಣಿಗಳು, ವಾಹನಗಳು, ರಾಷ್ಟ್ರಧ್ವಜಗಳು, ಬಾಹ್ಯಾಕಾಶದ ಅಂಶಗಳು ಹಾಗೂ ದೇಹದ ಭಾಗಗಳು ಸೇರಿದಂತೆ ಒಟ್ಟು 300 ಫ್ಲ್ಯಾಶ್‌ಕಾರ್ಡ್‌ಗಳನ್ನು ನಿಖರವಾಗಿ ಗುರುತಿಸಿ ಈ ಸಾಧನೆ ಮಾಡಿದ್ದಾನೆ.

ಮಗುವಿನ ಈ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಆತನನ್ನು “ONE IN A MILLION” (ಲಕ್ಷದಲ್ಲೊಬ್ಬ) ಎಂದು ಪ್ರಶಂಸಿಸಿದೆ.


ಮಗುವಿನ ಈ ಸಾಧನೆಗೆ ಪೋಷಕರ ಸತತ ತರಬೇತಿ ಹಾಗೂ ಕಾಳಜಿಯೇ ಕಾರಣವಾಗಿದೆ. ಪ್ರಸ್ತುತ ಮಗುವಿಗೆ ಸಂಸ್ಥೆಯಿಂದ ಅಧಿಕೃತ ಪದಕ (Medal) ಹಾಗೂ ಪ್ರಮಾಣಪತ್ರ (Certificate) ತಲುಪಿದ್ದು, ಕುಟುಂಬಸ್ಥರು ಹಾಗೂ ಊರಿನವರು ಹರ್ಷ ವ್ಯಕ್ತಪಡಿಸಿದ್ದಾರೆ.