ಚೆಸ್ ಪಂದ್ಯಾಟದ ಪೂರ್ವಭಾವಿ ಬೈಠಕ್

0
4


ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾಮಟ್ಟದ ಚೆಸ್ ಪಂದ್ಯಾಟವನ್ನು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಕುಂದಾಪುರ ಇಲ್ಲಿ ನಡೆಸಲು ನಿರ್ಧಾರಿಸಲಾಗಿತ್ತು‌. ಹಾಗೆಯೇ ಅದರ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಕರೆಯಲಾಯಿತು, ಈ ಸಭೆಯಲ್ಲಿ
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಪಾಂಡುರಂಗ ಪೈ, ವಿದ್ಯಾಭಾರತಿ ಉಡುಪಿ ಕರ್ನಾಟಕ ಜಿಲ್ಲೆಯ ಕಾರ್ಯದರ್ಶಿಗಳಾದ ಮಹೇಶ್ ಹೈಕಾಡಿ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಉಪಾಧ್ಯಕ್ಷ ಮತ್ತು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಶಾಲೆಯ ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ್ ಆಚಾರ್ಯ, ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶಾರೀರಿಕ ಪ್ರಮುಖ್ ವಿಜಯ್ ಕುಮಾರ್ ಶೆಟ್ಟಿ, ಡ್ಯುಯಲ್ ಸ್ಟಾರ್ ಶಾಲೆಯ ಸಂಚಾಲಕ ಶಶಿಧರ್ ದೇವಾಡಿಗ, ಶಾಲೆಯ ಮುಖ್ಯೋಪಾಧ್ಯಾಯಿನಿ ರಾಧಿಕಾ ಎಸ್, ದೈಹಿಕ ಶಿಕ್ಷಣ ಶಿಕ್ಷಕ ಕುಮಾರ ಸಾಲಿಗ್ರಾಮ, ಚೇರ್ಕಾಡಿ ರಾಷ್ಟ್ರೋತ್ಥಾನ ದೈಹಿಕ ಶಿಕ್ಷಣ ಶಿಕ್ಷಕ ರಜತ್, ಸಹ ಶಿಕ್ಷಕ ವಿಘ್ನೇಶ್ ಜಿ ಎಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here