ಪ್ರೇಮ್ ಮೊರಾಸ್ ಅವರಿಗೆ ಕೊಂಕಣಿ ಮಾತೃ ಭಾಷೆಯಲ್ಲಿ ಡಾಕ್ಟರೇಟ್ ಡಿಗ್ರಿ

0
92

ಪ್ರೇಮ್ ಮೊರಾಸ್ ಕೊಂಕಣಿ ಮಾತೃ ಭಾಷೆಯಲ್ಲಿ ಕರ್ನಾಟಕದ ಮೊದಲ ಪಿಎಚ್ಡಿ ಬರೆದು ಉತ್ತೀರ್ಣರಾಗಿ ಡಾಕ್ಟರೇಟ್ ಡಿಗ್ರಿಯನ್ನು ಪಡೆದಿದ್ದಾರೆ. 

ಅವರ ತಂದೆ ದಿವಂಗತ ಪಾವ್ಲ್ ಮೊರಾಸ್ ಕೊಂಕಣಿ ಭಾಷಾ ಮಂಡಳ ಕರ್ನಾಟಕ ರಿ ಇದರ ಅಧ್ಯಕ್ಷ ಆಗಿದ್ದರು.

ಅವರ ತಾಯಿ ಜೂಲಿಯೆಟ್‌ ಮೊರಾಸ್ ಪ್ರಸ್ತುತ ಸಹ ಕಾರ್ಯದರ್ಶಿ ಆಗಿದ್ದಾರೆ. 

ಕೊಂಕಣಿ ಭಾಷೆಗೆ ಇದು ಕರ್ನಾಟಕದಲ್ಲಿ ಗೌರವ ಪ್ರಶಸ್ತಿ ಸಿಕ್ಕಿ ಹಾಗೆ ಆಗಿದೆ. ಕೆಬಿಎಂಕೆ ಕಳೆದ ವರುಷದಲ್ಲಿ ತನ್ನ ಐವತ್ತು ವರ್ಷಗಳ ಆಚರಣೆ ಮಾಡಿತ್ತು. ಒಂದಿಡಿ ದಿನ‌ ಮಂಗಳೂರು ಪುರಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೊಂಕಣಿ ಅಕಾಡೆಮಿ ಆಗಲು ಕಾರಣವಾಗಿತ್ತು. ವಿಶ್ವ ಕೊಂಕಣಿ ಮಾತೃಭಾಷೆ ಸಮ್ಮೇಳನ ಹಮ್ಮಿಕೊಂಡಿತ್ತು ಮತ್ತು ಉಳಿದ 14 ಲಕ್ಷ ರೂಪಾಯಿ ವ್ಯಯಿಸಿ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಕೇಂದ್ರ ನೊಂದಾವಣೆ ಮಾಡಿ ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ದಿವಂಗತ ಬಸ್ತಿ ವಾಮನ ಶೆಣೈ ಮೊದಲ ಅಧ್ಯಕ್ಷರಾಗಿ ಆರಂಭಿಸಲಾಗಿತ್ತು. ಈಗಲೂ ಕೊಂಕಣಿ ಕಾರ್ಯಕ್ರಮ ಮಾಡಲು ಮೀಸಲಾಗಿದೆ. 

ಕೊಂಕಣಿ ಎಂಟನೆಯ ಪರಿಚ್ಛೇದ ಸೇರಲು ವಿಶ್ವವ್ಯಾಪಿ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಾಗಿತ್ತು.  

ಈಗಿನ ಕಾರ್ಯಕಾರಿ ಅಧ್ಯಕ್ಷ ಕೆ ವಸಂತ ರಾವ್ ಮುಂದಾಳತ್ವದಲ್ಲಿ ಮುಂದುವರೆಸಿಕೊಂಡು ಹೋಗುತ್ತಿದೆ.

ಪತ್ರಿಕಾ ಗೋಷ್ಠಿಯಲ್ಲಿ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಅಧ್ಯಕ್ಷ ಕೆ ವಸಂತ ರಾವ್, ಕಾರ್ಯದರ್ಶಿ ರೇಮಂಡ್ ಡಿಕೂನಾ, ಸಹ ಕಾರ್ಯದರ್ಶಿ ಜೂಲಿಯೆಟ್‌ ಮೊರಾಸ್, ಕಾರ್ಯಕಾರಿ ಸದಸ್ಯರಾದ ಪ್ರಶಾಂತ ಶೇಟ್, ಡಾ ಅರವಿಂದ್ ಶಾನ್ ಭಾಗ್ ಉಪಸ್ಥಿತರಿದ್ದರು.  

LEAVE A REPLY

Please enter your comment!
Please enter your name here