Saturday, April 19, 2025
HomeUncategorized“ಅವೇಕ್ ಕುಡ್ಲ” ಲೋಕಾರ್ಪಣೆ ಮತ್ತು ಮಾಧ್ಯಮ ಸಂವಾದ

“ಅವೇಕ್ ಕುಡ್ಲ” ಲೋಕಾರ್ಪಣೆ ಮತ್ತು ಮಾಧ್ಯಮ ಸಂವಾದ

ಶ್ರೀ ಅಂಬಾ ಮಹೇಶ್ವರಿ ಸೇವಾ ಟ್ರಸ್ಟ್ (ರಿ.) ವತಿಯಿಂದ “ಅವೇಕ್ ಕುಡ್ಲ” ಪರಿಕಲ್ಪನೆ ಏಪ್ರಿಲ್ 4, 2025 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಅಭಿಯಾನ ಮಂಗಳೂರಿನ ತ್ಯಾಜ್ಯ ನಿರ್ವಹಣೆ, ಸಂಚಾರ ಸುಧಾರಣೆ, ಹಸಿರೀಕರಣ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಗುರಿಯಾಗಿರುತ್ತದೆ.

ಈ ಕಾರ್ಯಕ್ರಮದಲ್ಲಿ ಸ್ವಾಮಿ ಜಿತಕಾಮಾನಂದಜಿ (ರಾಮಕೃಷ್ಣ ಮಠ), ಶ್ರೀ ಎನ್. ವಿನಯ್ ಹೆಗ್ಡೆ (ನಿಟ್ಟೆ ಸಮೂಹ ಸಂಸ್ಥೆಗಳು) ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ “ಕೌಶಲ್ಯ ಭವನ” ರೂಪುರೇಷೆ ಅನಾವರಣ ಕೂಡ ನಡೆಯಲಿದೆ. ಕಾರ್ಯಕ್ರಮದ ಬಳಿಕ ಮಾಧ್ಯಮ ಸಂವಾದವನ್ನು ಆಯೋಜಿಸಲಾಗಿದ್ದು, ತ್ಯಾಜ್ಯ ನಿರ್ವಹಣೆ ಮತ್ತು ಸಂಚಾರ ಸುಧಾರಣೆಯ ಬಗ್ಗೆ ಚರ್ಚೆ ನಡೆಯಲಿದೆ. 

RELATED ARTICLES
- Advertisment -
Google search engine

Most Popular