ಮಾನ್ಯ ಮುಖ್ಯಮಂತ್ರಿಯವರ ವಿಶೇಷ ಅಭಿವೃದ್ದಿ ಯೋಜನೆಯಡಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಮರೋಳಿ ವಾರ್ಡಿನ ಪ್ರೇಮ್ನಗರ –ಶಾಂತಿಕಿರಣ ರಸ್ತೆ ಕಾಂಕ್ರೀಟೀರಣಕ್ಕಾಗಿ ರೂ. 50.00ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿ , ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ದಿನಾಂಕ: 10-01-2026ರಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾಜಿ ಕರ‍್ಪೋರೇಟರ್ ಕೇಶವ ಮರೋಳಿ . ವರ‍್ಡ್ ಅಧ್ಯಕ್ಷರಾದ ಗಂಗಾಧರ್ ಪೂಜಾರಿ ಭೂತ್ ಅಧ್ಯಕ್ಷರು ಜೋಯ್ ಕ್ರಾಸ್ಟಾ , ವಿಷ್ಣು ನಾಯಕ್ , ಸುಧೀರ್ ಕುಮಾರ್ , ದಿನೇಶ್ ದೇವಾಡಿಗ , ಜೇಮ್ಸ್ ಪ್ರವೀಣ್ ಸ್ಥಳೀಯರಾದ ಕರುಣಾಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


