ಜಾಗತಿಕ ಅನುಮೋದನೆಯಲ್ಲಿ ಶೇ. 75 ರಷ್ಟು ಬೆಂಬಲದೊಂದಿಗೆ ಅಗ್ರಸ್ಥಾನ ಪಡೆದ ಪ್ರಧಾನಿ ನರೇಂದ್ರ ಮೋದಿ!

0
41

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ನಿಂಗ್ ಕನ್ಸಲ್ಟ್‌ನ ಇತ್ತೀಚಿನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್‌ನಲ್ಲಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ಉನ್ನತ ಶ್ರೇಯಾಂಕಿತ ಜಾಗತಿಕ ನಾಯಕರಾಗಿ ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ. ಜುಲೈ 4 ರಿಂದ 10, 2025 ರ ನಡುವೆ ನಡೆದ ಸಮೀಕ್ಷೆಯಲ್ಲಿ, 75% ಅನುಮೋದನೆ ರೇಟಿಂಗ್‌ನೊಂದಿಗೆ ಮೋದಿ ಜಾಗತಿಕ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದು ದೇಶಕ್ಕೆ ಒಂದು ಹೆಮ್ಮೆಯ ಸಂಗತಿಯಾಗಿದೆ.

ಮೋದಿ ಅತ್ಯಂತ ವಿಶ್ವಾಸಾರ್ಹ ನಾಯಕನಾಗಿರುವ ಈ ಸಾಧನೆಯನ್ನು ಕೊಂಡಾಡಿ, ಬಿಜೆಪಿ ನಾಯಕ ಅಮಿತ್ ಮಾಳವೀಯ, “ಒಂದು ಶತಕೋಟಿಗೂ ಹೆಚ್ಚು ಭಾರತೀಯರಿಂದ ಪ್ರೀತಿಸಲ್ಪಟ್ಟ ಮತ್ತು ಪ್ರಪಂಚದಾದ್ಯಂತ ಗೌರವಿಸಲ್ಪಟ್ಟ ಪ್ರಧಾನಿ ಮೋದಿ, ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಭಾರತ ಸುರಕ್ಷಿತ ಕೈಯಲ್ಲಿದೆ,” ಎಂದು Xನಲ್ಲಿ ಪೋಸ್ಟ್ ಮಾಡಿದ್ದಾರೆ.

75% ರೇಟಿಂಗ್ ಪಡೆದು ಅಗ್ರಸ್ಥಾನ ಕಾಯ್ದುಕೊಂಡ ಮೋದಿ!

ಮೋದಿಯವರ 75% ರೇಟಿಂಗ್, ದಕ್ಷಿಣ ಕೊರಿಯಾದ ಲೀ ಜೇಮ್ಯುಂಗ್ (59%), ಅರ್ಜೆಂಟೀನಾದ ಜೇವಿಯರ್ ಮಿಲೀ (57%), ಮತ್ತು ಕೆನಡಾದ ಮಾರ್ಕ್ ಕಾರ್ನೆ (56%) ನಂತಹ ನಾಯಕರನ್ನು ಗಾಢವಾಗಿ ಹಿಂದಿಕ್ಕಿದೆ. ಅಮೆರಿಕ ಅಧ್ಯಕ್ಷ ರೊನಾಲ್ಡ್‌ ಟ್ರಂಪ್ 44% ರೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಈ ಫಲಿತಾಂಶಗಳು, ಅಂತರರಾಷ್ಟರೀಯ ವೇದಿಕೆಯಲ್ಲಿ ಮೋದಿಯವರ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಯನ್ನು ಒತ್ತಿಹೇಳುತ್ತವೆ. ಹೀಗಾಗಿ ಭಾರತದ ಪ್ರಧಾನಿಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.

2021ರ ಸೆಂಟೆಂಬರ್‌ನಿಂದಲೂ ಮೋದಿಯವರು ಮಾರ್ನಿಂಗ್ ಕನ್ಸಲ್ಟ್‌ನ ಶ್ರೇಯಾಂಕದಲ್ಲಿ ನಿರಂತರವಾಗಿ ಅಗ್ರಸ್ಥಾನವನ್ನು ಕಾಯ್ದಿರುವುದು ಗಮನಾರ್ಹ. 2021ರ ಸೆಂಟೆಂಬರ್‌ನಲ್ಲಿ 70% ರೇಟಿಂಗ್‌ನೊಂದಿಗೆ ಮುನ್ನಡೆ ಸಾಧಿಸಿದ್ಟರೆ, 2022ರ ಆರಂಭದಲ್ಲಿ 71.2%ಗೆ ಏರಿತು. 2023ರಲ್ಲಿ ಏಪ್ರಿಲ್​, ಸೆಪ್ಟೆಂಬರ್​ ಮತ್ತು ಡಿಸೆಂಬರ್‌ನ ಸಮೀಕ್ಷೆಯಲ್ಲಿ 76% ರೇಟಿಂಗ್ ಪಡೆದಿದ್ದರು. 2024ರ ಫೆಬ್ರವರಿಯಲ್ಲಿ ಅವರ ಅನುಮೋದನೆ 78%ಗೆ ತಲುಪಿತು, ಇದು ಅವರ ಜಾಗತಿಕ ನಾಯಕತ್ವದ ಸ್ಥಿರತೆಯನ್ನು ತೋರಿಸಿದೆ.

22 ದೇಶಗಳ ಡೇಟಾ ಸಂಗ್ರಹಿಸಿ ಜಾಗತಿಕ ಮನ್ನಣೆ!

ಈ ಸಮೀಕ್ಷೆಯು 22 ದೇಶಗಳ 43,000ಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿದ ಡೇಟಾವನ್ನು ಆಧರಿಸಿದ್ದು, ಮೋದಿಯವರ ನಾಯಕತ್ವಕ್ಕೆ ಜಾಗತಿಕ ಮನ್ನಣೆಯನ್ನು ಪ್ರತಿಬಿಂಬಿಸುತ್ತದೆ. ಮೋದಿಯವರ ಈ ಸಾಧನೆಗೆ ಕಾರಣವೆಂದರೆ, ಭಾರತದ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿಯ ಯಶಸ್ಸು, ಮತ್ತು ಜನಪರ ಕಾರ್ಯಕ್ರಮಗಳು. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮತ್ತು ಆಯುಷ್ಮಾನ್ ಭಾರತದಂತಹ ಯೋಜನೆಗಳು ದೇಶಾದ್ಯಂತ ಜನರ ಜೀವನವನ್ನು ಸುಧಾರಿಸಿವೆ.

ಅಂತರರಾಷ್ಟ್ರೀಯವಾಗಿ G20, BRICS, ಮತ್ತು ಕ್ವಾಡ್‌ನಂತಹ ವೇದಿಕೆಗಳಲ್ಲಿ ಭಾರತದ ಪಾತ್ರವನ್ನು ಬಲಪಡಿಸಿದ್ದಾರೆ. ರಷ್ಯಾ-ಯುಕ್ರೇನ್ ಸಂಘರ್ಷದಂತಹ ಜಾಗತಿಕ ಬಿಕ್ಕಟ್ಟುಗಳಲ್ಲಿ ಭಾರತದ ತಟಸ್ಥತೆ ಮತ್ತು ಶಾಂತಿಯ ಕರೆಯು ಅವರನ್ನು ಜಾಗತಿಕ ರಾಜತಾಂತ್ರಿಕ ನಾಯಕನಾಗಿ ಎತ್ತಿ ತೋರಿಸಿದೆ.

LEAVE A REPLY

Please enter your comment!
Please enter your name here