ಉಡುಪಿ : ಖಾಸಗಿ ಶಾಲೆಗೆ ಸೇರಿದ ಬಸ್‌ವೊಂದು ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್ ಮೇಲೇರಿ ನಿಂತ ಘಟನೆ ಮಣಿಪಾಲದ ಐನಾಕ್ಸ್ (ಸಿನಿಗ್ಯಾಲಕ್ಸಿ) ಮುಂಭಾಗ ಗುರುವಾರ ಬೆಳಿಗ್ಗೆ ನಡೆದಿದೆ.
ಮಣಿಪಾಲ ಟ್ರಾಫಿಕ್ ಸಿಗ್ನಲ್‌ನಿಂದ ಲಕ್ಷ್ಮೀಂದ್ರನಗರ ಕಡೆಗೆ ಸಾಗುವ ತಿರುವಿನ ಬಳಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ರಸ್ತೆ ಮಧ್ಯದ ಡಿವೈಡರ್‌ಗೆ ಏರಿ ನಿಂತಿದೆ.
ಅಪಘಾತದ ರಭಸಕ್ಕೆ ಹೆದ್ದಾರಿಯ ತಡೆಬೇಲಿ ಹಾನಿಗೊಳಗಾಗಿದ್ದು, ಬಸ್‌ನ ಮುಂಭಾಗಕ್ಕೂ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

