ಮೂಡುಬಿದಿರೆ: ಅಗರಿ ಎಂಟರ್ ಪ್ರೈಸಸ್ ವತಿಯಿಂದ ಆಯೋಜಿಸಲಾದ ಹಬ್ಬ ಹಬ್ಬಗಳ ಉತ್ಸವ ಪ್ರತಿ ದಿನ ಒಂದು ಬಹುಮಾನ, 100 ದಿನ 100 ಬಹುಮಾನ ಕಾರ್ಯಕ್ರಮದ 7ನೇ ಹಂತದ 6ನೇ ಡ್ರಾ ಸೋಮವಾರ ಸಾಯಂಕಾಲ 4 ಗಂಟೆಗೆ ಮೂಡಬಿದಿರೆ ಗಾಂಧಿನಗರದ ಶಾಖೆಯಲ್ಲಿ ನಡೆಯಿತು.
ಸಮಾಜ ಸೇವಕ ಅಶ್ರಫ್ ಮರೋಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಅಗರಿ ಸಂಸ್ಥೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿದೆ. ಸಂಸ್ಥೆ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು. ಡ್ರಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಅಶ್ರಫ್ ಮರೋಡಿ, ಪತ್ರಕರ್ತ ಜಗದೀಶ್ ಪೂಜಾರಿ, ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಯಲ್ಲನ ಗೌಡ, ಆಳ್ವಾಸ್ ಕಾಲೇಜು ಉಪನ್ಯಾಸಕ ಶಿವಪ್ರಸಾದ್ ಎಂ., ಉದ್ಯಮಿ ಸುಶಾಂತ್ ಕರ್ಕೇರ, ವಸಂತ್ ಎಸ್. ಕೋಟ್ಯಾನ್ , ಶೇಖರ್ ಸಾಲ್ಯಾನ್ ಎಡಪದವು, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ, ಎನ್. ನಿತೇಶ್ ಕೋಟ್ಯಾನ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಿಸಲಾಯಿತು.

ಮ್ಯಾನೇಜರ್ ಸುಭಾಷ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಅಗರಿ ಎಂಟರ್‌ಪೈಸಸ್, ಮೂಡುಬಿದಿರೆಯ ಸಂಚಾಲಕ ಅಗರಿ ವಾದಿರಾಜ ರಾವ್ ನಿರೂಪಿಸಿದರು. ಮಾಲಕರಾದ ಅಗರಿ ರಾಘವೇಂದ್ರ ರಾವ್ ವಂದಿಸಿದರು. ಅಗರಿ ಎಂಟರ್‌ಫೈಸಸ್ ಮೂಡುಬಿದಿರೆ. ಮಂಗಳೂರು, ಸುರತ್ಕಲ್, ಎಡಪದವು, ಶುಭಗಿರಿ ಹಾಗೂ ಕುಳಾಯಿಯಲ್ಲಿ ಸಂಸ್ಥೆ ಸ್ಥಾಪಿಸಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಪ್ರತಿ 3 ಸಾವಿರ ರೂ. ಖರೀದಿಗೆ ಗ್ರಾಹಕರಿಗೆ ನೀಡುವ ಕೂಪನ್ ನಲ್ಲಿ ಅದೃಷ್ಟ ಬಹುಮಾನ ಎಸಿ , ರೆಫ್ರಿಜರೇಟರ್ , ವಾಷಿಂಗ್ ಮಷೀನ್, ಎಲ್ಇಡಿ, ಸೋಫಾ , ಡೈನಿಂಗ್ ಟೇಬಲ್, ಮಿಕ್ಸಿ , ತವ , ಕುಕ್ಕರ್ , ಚೇರ್, ಹಾಟ್ ಬಾಕ್ಸ್, ಅಲ್ಮೆರಾ , ಡ್ರೆಸ್ಸಿಂಗ್ ಟೇಬಲ್ , ಆಫೀಸ್ ಟೇಬಲ್, ಸೇರಿದಂತೆ ಸಾವಿರಕ್ಕೂ ಅಧಿಕ ಬಹುಮಾನಗಳನ್ನು ತಮ್ಮದಾಗಿಸಬಹುದು. ಡ್ರಾ ವಿಜೇತರಾದ ಚಂದ್ರಶೇಖರ್, ಡಾ. ಸುರೇಶ್, ಸುಶ್ಮಿತಾ, ಅಶೋಕ್ ಶೆಟ್ಟಿ, ಹೇಮಚಂದ್ರ ಉಪಸ್ಥಿತರಿದ್ದರು.
ವರದಿ : ಜಗದೀಶ ಪೂಜಾರಿ ಕಡಂದಲೆ
