ಮಂಗಳೂರು: ಎಕ್ಸ್‌ಫರ್ಟ್ ಶಿಕ್ಷಣ ಸಂಸ್ಥೆಯ ಕಲುಷಿತ ನೀರು ಒಳಚ್ಚಿಲ್ ಮೇರ್ಲಪದವು ಪ್ರದೇಶದಲ್ಲಿ ಹರಿದು ಸದರಿ ಪ್ರದೇಶಗಳ ಬಾವಿಗಳಗೆ ಕಲುಷಿತ ನೀರು ಸೇರಿ ಎಲ್ಲಾ ಬಾವಿಗಳ ನೀರು ಕಲುಷಿತಗೊಂಡು ನೀರು ಕುಡಿಯಲು ಸಾಧ್ಯವಿಲ್ಲವೆಂದು ವರದಿಯಾಗಿದೆ. ಅಲ್ಲದೇ ಇಂದು ಒಳಚ್ಚಿಲ್ ಮೇರ್ಲಪದವು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಗುಡ್ಡ ಕುಸಿತಗೊಂಡು ಸುಮಾರು 40 ಮನೆಗಳು ಅಪಾಯದ ಪರಿಸ್ಥಿತಿಯಲ್ಲಿದೆ. ಮತ್ತು ಕೃಷಿಭೂಮಿ ನಾಶಗೊಂಡಿದ್ದು ಎಲ್ಲ ಕಡೆ ಮಣ್ಣು ತುಂಬಿ ಒಂದು ಕೆರೆಯಲ್ಲಿ ಮಣ್ಣು ತುಂಬಿದೆ. ಈಗಾಗಲೇ ದೂರುಗಳನ್ನು ನೀಡಿದದ್ದರೂ ಯಾರೂ ಸ್ಪಂದಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ . ಈ ಸ್ಥಳಕ್ಕೆ ಭೇಟಿ ನೀಡಿದ ಐವನ್ ಡಿʼಸೋಜಾರವರು ತಹಶೀಲ್ದಾರರು ಮತ್ತು ಅಡ್ಯಾರ್ ಪಂಚಾಯತ್ ಮತ್ತು ಜಿಲ್ಲಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಆ ಪರಿಸರದಲ್ಲಾದ ಪರಿಸ್ಥಿತಿಯನ್ನು ಕೂಡಲೇ ಅವಲೋಕಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕುಡಿಯುವ ನೀರು ಕಲುಷಿತಗೊಂಡ ಕಾರಣಕ್ಕಾಗಿ ಬಾವಿಯ ನೀರು ಹಾಳಾಗಿರುವುದು ಸ್ಥಳೀಯವಾಗಿ ಸ್ಥಳೀಯ ಪರಿಸರದಲ್ಲಿ ಕುಡಿಯುವ ನೀರಿಗೆ ಸಂಕಟ ಎದುರಾಗಿದೆ. ಇದು ಎಕ್ಸ್‌ಪರ್ಟ್ ಕಾಲೇಜಿನ ಹಾಸ್ಟೆಲ್‌ನ ಕಲುಷಿತ ನೀರು ಹರಿದು ಹೋಗಿ ಸುಮಾರು 22 ಮನೆಗಳ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ ಮತ್ತು ಎಲ್ಲಾ ಬಾವಿಗಳನೀರು ಕೂಡ ಕಲುಷಿತಗೊಂಡಿದೆ ಎಂದು ಹಾಗೂ ನೀರನ್ನು ಪರಿಷ್ಕರಣೆ (Test) ಮಾಡಿದಾಗ ಇದು ಕುಡಿಯಲು ಯೋಗ್ಯವಲ್ಲ ಎಂದೂ ವರದಿಗಳು ಬಂದಿವೆ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ತಹಶೀಲ್ದಾರರು ಮತ್ತು EO ರವರು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬಿದ್ದಿರುವ ಗುಡ್ಡೆಯನ್ನು ಕೂಡಲೇ ಎಕ್ಸ್‌ಪರ್ಟ್ ಕಾಲೇಜಿನವರಿಂದ ಕಟ್ಟಿಸಿ ಕೊಡಬೇಕೆಂದೂ, ಇದು ಖಾಸಗೀ ಜಾಗವಾಗಿರುವುದರಿಂದ ಕಾಲೇಜಿನವರೇ ಅದನ್ನು ಕಟ್ಟಿಸಿಕೊಡುವಂತದ್ದು ಅವರ ಕರ್ತವ್ಯವಾಗಿದ್ದು, ಮತ್ತು ಕಲುಷಿತ ನೀರಿನ ಬಗ್ಗೆಯು ಕೂಡಲೇ ತನಿಖೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿಜೋಜಾರವರು ಜಿಲ್ಲಾಡಳಿತಕ್ಕೆ ತಾಲೂಕು ತಹಶೀಲ್ದಾರರಿಗೆ ತಮ್ಮ ಗ್ರಾಮ ಪಂಚಾಯತ್‌ಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟ ಮಾಡುವುದು ಅನಿವಾರ್ಯವೆಂದು ಸ್ಥಳೀಯರು ತಿಳಿಸಿದ್ದು ಈ ಬಗ್ಗೆ ಯಾವುದೇ ಇಂತಹ ವಿಚಾರಗಳಿಗೆ ಅಸ್ಪದ ನೀಡಬಾರದೆಂದು ಐವನ್ ಡಿʼಸೋಜಾರವರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಈ ಕ್ಯಾಥೋಲಿಕ್ ಸಭೆಯ ಸ್ಟ್ಯಾನಿ ಲೋಬೋ, ಮಾರ್ಸೆಲ್ ಮೊಂತೆರೋ, ಸತೀಶ್ ಡಿ ಕುನ್ಹ, ಸಿಸಿಲ್ ಸುನೀತಾ ಡಿʼಸೋಜಅ, ಬೆನೆಡಿಕ್ಟ್ ಡಿʼಸೋಜಾ, ರಾಜೇಶ್ ಕೋಟ್ಯಾನ್ ಮುಂತಾದವರು ಜೊತೆಗಿದ್ದರು.

