ಭಾರತೀಯ ಜನತಾ ಪಾರ್ಟಿ ತುಂಬೆ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ತುಂಬೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು. 9/11 ಪಂಚಾಯತ್ ನಿಂದ ಮೂಡಕ್ಕೆ ವರ್ಗಾವಣೆ ಮಾಡಿದ ವಿರುದ್ಧ, ಗ್ರಾಮ ಪಂಚಾಯತ್ ಗೆ ಸರಿಯಾದ ಅನುದಾನ ನೀಡದ ವಿರುದ್ಧ, ಸಂಧ್ಯಾ ಸುರಕ್ಷಾ ಯೋಜನೆ ಮತ್ತು ವೃದ್ಯಾಪ ವೇತನ ತಡೆ ಹಿಡಿದ ವಿರುದ್ಧ, ಅಕ್ರಮ ಸಕ್ರಮ ಅರ್ಜಿಗಳ ತಿರಸ್ಕಾರ, ಬಡವರಿಗೆ ಸಿಗುತ್ತಿದ ಆಶ್ರಯ ಯೋಜನೆಗಳ ಹಣ ತಡೆ ಹಿಡಿದರ ವಿರುದ್ಧ, ವಿದ್ಯುತ್ ದರ ತೀವ್ರ ಏರಿಕೆ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಕಿರುಕುಳ ನೀಡುವ ಬಗ್ಗೆ ಪ್ರತಿಭಟನೆ ನಡೆಯಿತು. ಸಂದರ್ಭದಲ್ಲಿ ಮಂಗಳೂರು ಮಂಡಲದ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಶೇಖರ್ ಕಣ್ಣೀರ್ ತೋಟ ಮಾತನಾಡಿ ರಾಜ್ಯ ಸರಕಾರ ವೈಫಲ್ಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರಕಾರದ ವಿರುದ್ಧ ಗೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತ ಪಡಿಸಲಾಯಿತು. ಬಳಿಕ ತುಂಬೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸರಕಾರದ ವಿರುದ್ಧ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಮಂಡಲದ ಹಿಂದುಳಿದ ವರ್ಗದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಗಾಣದಲಚಿಲ್, ಕಿಶೋರ್ ರಾಮಲ್ ಕಟ್ಟೆ, ಜಯಂತಿ ಶ್ರೀಧರ್, ಹೇಮಲತಾ ಪೂಜಾರಿ ಸೇರಿದಂತೆ ಪಕ್ಷದ ಪ್ರಮುಖರಾದ ಸದಾನಂದ ಕೋಡಿಯಡ್ಕ, ಸಂಜೀವ ರಾಮಲ್ ಕಟ್ಟೆ, ರಂಜನ್ ರಾಮಲ್ ಕಟ್ಟೆ, ಆರ್ ಎಸ್ ಜಯ, ರಾಜೀವ ಗಾಣದಲಚಿಲ್, ಮನೋಹರ್ ಪರ್ಲಕ್ಕೆ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. ಸುಶಾನ್ ಸ್ವಾಗತಿಸಿದರು, ಪುದು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ರೂಪೇಶ್ ಜ್ಯೋತಿಗುಡ್ಡೆ ವಂದಿಸಿದರು.