ಹೈದರಾಬಾದ್: ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಹುಚ್ಚನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಪತಿ ಮತ್ತು ಅತ್ತೆ-ಮಾವನ ಕಿರುಕುಳದಿಂದ ಬೇಸತ್ತ 33 ವರ್ಷದ ಮನೋವೈದ್ಯೆಯೊಬ್ಬರು ಸನತ್‌ನಗರ ಜೆಕ್ ಕಾಲೋನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಕೆಯನ್ನು ಎ.ರಜಿತಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರೋಹಿತ್ ಮತ್ತು ಅವರ ಕುಟುಂಬದಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆಕೆಯ ತಂದೆ ಸಬ್ ಇನ್ಸ್‌ಪೆಕ್ಟರ್ ನರಸಿಂಹ ಗೌಡ ನೀಡಿದ ದೂರಿನ ಆಧಾರದ ಮೇಲೆ ಸಂಜೀವ ರೆಡ್ಡಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಮತ್ತು ಕುಟುಂಬ ಸದಸ್ಯರ ಪ್ರಕಾರ, ಸಬ್-ಇನ್ಸ್‌ಪೆಕ್ಟರ್ ನರಸಿಂಹ ಗೌಡ್ ಅವರ ಪುತ್ರಿ ಮತ್ತು ಸನತ್‌ನಗರ ಜೆಕ್ ಕಾಲೋನಿ ನಿವಾಸಿ ರಜಿತಾ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾಗ ರೋಹಿತ್‌ನನ್ನು ಭೇಟಿಯಾದರು. ಬಂಜಾರಾ ಹಿಲ್ಸ್‌ನ ಮಾನಸಿಕ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ, ರೋಹಿತ್ ರೋಗಿಯಾಗಿ ಬಂದಿದ್ದ.
ಆಕೆಯ ಕೌನ್ಸೆಲಿಂಗ್ ನಂತರ ರೋಹಿತ್‌ನ ಪೋಷಕರು ಅವನ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದ್ದಾನೆ ಎಂದು ಹೇಳಿದ್ದರು. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ರೋಹಿತ್, ರಜಿತಾ ಬಳಿ ಪ್ರೇಮ ನಿವೇದನೆ ಮಾಡಿದ್ದ. ಮದುವೆಯ ನಂತರ, ರೋಹಿತ್ ಕೆಲಸ ನಿಲ್ಲಿಸಿ ರಜಿತಾಳ ಸಂಬಳವನ್ನು ಪಾರ್ಟಿಗಳು ಮತ್ತು ವೈಯಕ್ತಿಕ ಖರ್ಚುಗಳಿಗೆ ಖರ್ಚು ಮಾಡುತ್ತಿದ್ದ. ಮಕ್ಕಳ ಮನಶ್ಶಾಸ್ತ್ರಜ್ಞೆಯಾಗಿ ಉದ್ಯೋಗದಲ್ಲಿದ್ದ ರಜಿತಾ, ರೋಹಿತ್‌ಗೆ ತನ್ನ ನಡವಳಿಕೆಯನ್ನು ಬದಲಾಯಿಸಲು ಪದೇ ಪದೇ ಕೇಳಿಕೊಂಡಿದ್ದಳು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ರೋಹಿತ್, ಅವನ ಪೋಷಕರಾದ ಕಿಷ್ಟಯ್ಯ ಮತ್ತು ಸುರೇಖಾ ಮತ್ತು ಅವನ ಸಹೋದರ ಮೋಹಿತ್ ರಜಿತಾಗೆ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ಆಕೆಯ ಕುಟುಂಬದ ಪ್ರಕಾರ, ಆಕೆ ಹಣ ನೀಡಲು ನಿರಾಕರಿಸಿದಾಗ ರೋಹಿತ್ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ.
ನಿರಂತರ ಕಿರುಕುಳವನ್ನು ಸಹಿಸಲಾಗದೆ, ರಜಿತಾ ಜುಲೈ 16 ರಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯನ್ನು ಡಿಸ್ಚಾರ್ಜ್ ಮಾಡಿದ ನಂತರ, ಆಕೆಯ ಪೋಷಕರು ಜೆಕ್ ಕಾಲೋನಿಯಲ್ಲಿರುವ ಮನೆಗೆ ಕರೆತಂದರು.
ಜುಲೈ 28 ರಂದು, ಅವರು ತಮ್ಮ ನಾಲ್ಕನೇ ಮಹಡಿಯ ಅಪಾರ್ಟ್‌ಮೆಂಟ್‌ನ ಸ್ನಾನಗೃಹದ ಕಿಟಕಿಯಿಂದ ಹಾರಿ ಮತ್ತೆ ಆತ್ಮಹತ್ಯೆಗೆ ಯತ್ನಿಸಿದರು, ತಲೆಗೆ ತೀವ್ರ ಗಾಯಗಳಾಗಿದ್ದವು. ಅವರನ್ನು ಅಮೀರ್‌ಪೇಟೆಯ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯಕೀಯ ಪರೀಕ್ಷೆಗಳ ನಂತರ ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಲಾಯಿತು. ರಜಿತಾ ಮಂಗಳವಾರ ನಿಧನರಾಗದ್ದಾರೆ