ಪುತ್ತೂರಲ್ಲಿ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳಿಗೆ ಗಾನಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆಯಲ್ಲಿ. ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಯ ಗರಿ.

0
112

ಪೆರ್ನಾಜೆ:ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ).ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತುರಲ್ಲಿ ಜೂನ್ 15 ರಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು.

ಆ ವೇದಿಕೆಯಲ್ಲಿ ವಿಶಿಷ್ಟ ವಿಶೇಷ ಬರಹಗಾರ ತಮ್ಮ ಕೃಷಿ ಜೇನು ಕೃಷಿ ಜೇನುಗಡ್ಡ ಸಂಶೋಧನೆ ಬರಹ ಕಲಾ ಸೇವೆಗಾಗಿ ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಗೆ, ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ)ಪಾಂಬಾರ್ ಸಂಚಾಲಕರಾದ ರವಿ ಪಾಂಬಾರ್ ತಿಳಿಸಿದ್ದಾರೆ.

ಎಲ್ಲಾ ವ್ಯಕ್ತಿಗಳು ವಿಭಿನ್ನ ಎಂಬುದೇ ಸತ್ಯ ಆಲೋಚನೆ ಯೋಚನೆಗಳು ವಿಭಿನ್ನವಾಗಿ ಇದ್ದಾಗ ಮಾತ್ರ ಬಾಳಲ್ಲಿ ವೈವಿಧ್ಯತೆ ಸಾಧ್ಯ ಪುತ್ತೂರು ಎಂದರೆ ಹತ್ತೂರು ಬಿಟ್ಟರು ಪುತ್ತೂರು ಬಿಡನೆಂಬದಂತೆ ಹತ್ತೂರಲ್ಲಿ ಸನ್ಮಾನಿಸಿದ್ದರು. ತನ್ನೂರಲ್ಲಿ ಗೌರವಿಸುವುದು ವಿಶಿಷ್ಟವೇ ಆಗಿದೆ ಇತ್ತೀಚೆಗೆ ದಾವಣಗೆರೆಯಲ್ಲಿ ಇಬ್ಬರನ್ನು ಗೌರವಿಸಿದ್ದು. ಇವರ ಸಾಧನೆಗೆ ಸಾಕ್ಷಿ ಹಾಗೆ ಈಶ್ವರಮಂಗಳದಲ್ಲಿ ನಡೆದ ಗ್ರಾಮ ಗ್ರಾಮ ಸಾಹಿತ್ಯ ಸoಬ್ರಮ ಮೂರನೇ ಸರಣಿ ಕಾರ್ಯಕ್ರಮದಲ್ಲಿ,ವಿಟ್ಲ ಸ್ವರ ಸಿಂಚನ ಸಂಗೀತೋತ್ಸವ 2024ರಲ್ಲೂ , ಬೆಂಗಳೂರು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಡಿನಾಡ ಸಮ್ಮೇಳನದಲ್ಲಿ ಮಧುಭೂಷಣ ಜಿಲ್ಲಾ ರಾಜ್ಯೋತ್ಸವ ಶಿವಮೊಗ್ಗ ಬೆಂಗಳೂರು ಸಂಘ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದ್ದಾರೆ.
ಕೃಷಿಕ ಜೀವನದಲ್ಲಿ ಸಾಧನೆ ಸುಲಭವಲ್ಲದಿದ್ದರೂ ಅಸಾಧ್ಯವೇನಲ್ಲ ಎಂದು ನಿರೂಪಿಸಿದ್ದಾರೆ.

LEAVE A REPLY

Please enter your comment!
Please enter your name here