ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ..ಬಿ. ಸಿ. ಟ್ರಸ್ಟ್ ( ರಿ ) ಗುರುವಾಯನಕೆರೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಮುಂಡೂರು ಇವರ ಸಹಕಾರದೊಂದಿಗೆ ಪರಿಸರ ಜಾಗೃತಿ ಮಾಹಿತಿ ಹಾಗೂ ಶಾಲಾ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಪ್ರಸ್ತಾವಿಕ ವಾಗಿ ಕೃಷಿ ಮೇಲ್ವಿಚಾರಕರು ಕೃಷ್ಣ ರವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಹೆಗ್ಗಡೆ ಯವರ ಮಾರ್ಗದರ್ಶನಂತೆ ಪ್ರತಿ ವರ್ಷ ಶಾಲಾ-ಕಾಲೇಜು, ಸಮುದಾಯ ಭವನ, ದೇವಸ್ಥಾನ, ಕೆರೆಯ0ಗಳದಲ್ಲಿ ಗಿಡ ನಾಟಿ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಮತ್ತು ಮಾಹಿತಿ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದ್ದೇವೆ. ಈ ಭೂಮಿ ಮೇಲೆ ಮನುಷ್ಯ ಬದುಕಬೇಕಾದರೆ ಪರಿಸರ ನಮಗೆ ತೀರ ಅವಶ್ಯವಾಗಿ ಬೇಕು. ಗಿಡವನ್ನು ನೆಟ್ಟು ಪಾಲನೆ,ಪೋಷಣೆ ಮಾಡಿ ರಕ್ಷಿಸಬೇಕೆಂದು ತಿಳಿಸಿದರು.

.
ಕಾರ್ಯಕ್ರಮ ಉದ್ಘಾಟಿಸಿ ಚಾಮರಾಜ ಸೀಮಿತ್ ರವರು ಮಾತನಾಡಿ ಈ ಭೂಮಿಲಿ ಇರುವಂತ ಪ್ರತಿಯೊಂದು ಪಶು, ಪಕ್ಷಿ, ಪ್ರಾಣಿಗಳು, ಮನುಷ್ಯರು ಬದುಕಬೇಕೆಂದರೆ ನಮಗೆ ಈ ಭೂಮಿಯ ಮೇಲೆ ಪರಿಸರ ಅತ್ಯಂತ ಮುಖ್ಯವಾಗಿ ಬೇಕಾಗಿರುವಂತದ್ದು, ಮನುಷ್ಯನ ಉಸಿರಾಟಕ್ಕೆ ಆಮ್ಲಜನಕ ಎಷ್ಟು ಮುಖ್ಯವೋ, ಶುದ್ಧವಾದ ಆಮ್ಲಜನಕ ಕೊಡುವಂತ ಗಿಡ ಮರಗಳು ಅಷ್ಟೇ ಮುಖ್ಯವಾದದ್ದು ಹಾಗಾಗಿ ಎಲ್ಲರೂ ಗಿಡ ನೆಟ್ಟು, ಗಿಡಗಳ ರಕ್ಷಣೆ ಮಾಡಬೇಕೆಂದು ತಿಳಿಸಿದರು.
ಗಿಡ ನಾಟಿ ಕಾರ್ಯಕ್ರಮ ವನ್ನು ಮೇಲ್ವಿಚಾರಕಿ ಯವರು ಯಶೋಧ ರವರು ಚಾಲನೆ ನೀಡಿದರು
ಶೌರ್ಯ ವಿಪತ್ತುಗುರುವಾಯನಕೆರೆ ತಂಡ ದವರಿಂದ ಗಿಡ ನಾಟಿ ಮಾಡಲಾಯಿತು
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಕಲ್ಲೇಶ್ , ಅವರು ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ,ಶೌರ್ಯ ತಂಡದ ನಾಗೇಶ್, ಜಗನಾಥ್ , ಸೇವಾಪ್ರತಿನಿಧಿ ಶ್ರೀ ಮತಿ ಭಾರತಿ ಹಾಗೂ ಶ್ರೀ ಮತಿ ಪ್ರತಿಭಾ, ಚಂದ್ರವತಿ, ಹಾಗೂ ಅಶೋಕ್ ಜೈನ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು, ಸಂಘದ ಸದಸ್ಯರು, ಶಾಲೆಯ ಮಕ್ಕಳು, ಊರಿನ ಗ್ರಾಮಸ್ಥರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.