ರಾಮ್ ಫ್ರೆಂಡ್ಸ್ (ರಿ) ಕಟೀಲು ತಂಡದಿಂದ ಮಗುವಿನ ಚಿಕಿತ್ಸೆಗೆ ಚೆಕ್‌ ಹಸ್ತಾಂತರ

0
192

ರಾಮ್ ಫ್ರೆಂಡ್ಸ್ ರಿ ಕಟೀಲು ತಂಡದಿಂದ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಜಾತ್ರೆಯಲ್ಲಿ ನಡೆದ ಆರೋಗ್ಯ ಸೇವಾ ನಿಧಿ ಅಭಿಯಾನದಲ್ಲಿ ಸಂಗ್ರಹವಾದ ಮೊತ್ತವನ್ನು ಮಂಗಳೂರು ಪಚ್ಚನಾಡಿ ನಿವಾಸಿಯಾಗಿರುವ ತನುಷ್(4 ವರ್ಷ) ಎಂಬ ಮಗುವಿಗೆ ಕಿವಿಯ ಸಾಧನವನ್ನು ಅಳವಡಿಸಲು ಚಿಕಿತ್ಸೆಗೆ ನಮ್ಮ ತಂಡದ ಸೇವಾ ಬಂಧುಗಳ ಹಾಗೂ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಸಹಕರಿಸಿದ ಮೊತ್ತವನ್ನು ಪೊಳಲಿ ರಾಜರಾಜೇಶ್ವರಿ ಅಮ್ಮನ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾದ ರಾಮ್ ಭಟ್ ಪೊಳಲಿ ಇವರ ಅಭಯ ಹಸ್ತದಿಂದ 64,000 ರೂಪಾಯಿಯ ಚೆಕ್ಕನ್ನು ಮಗುವಿಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತದ ಮಂಡಳಿಯ ಅಧಿಕಾರಿ ನಾಗೇಶ್ ಪೊಳಲಿ ತಂಡದ ಸ್ಥಾಪಕಧ್ಯಕ್ಷರಾದ ರಮಾನಂದ ಪೂಜಾರಿ ಕಟೀಲು, ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗಮಿಜಾರು, ಉಪಾಧ್ಯಕ್ಷರಾದ ರಾಕೇಶ್ ಪೊಳಲಿ ಸದಸ್ಯರಾದ , ಗುರುಪ್ರಸಾದ್ ಮುಲ್ಕಿ , ನಿರಂಜನ್ ಕರ್ಕೇರ , ರಾಕೇಶ್ ಬಜ್ಪೆ,ನಾಗೇಶ್, ದಿನೇಶ್, ರೂಪೇಶ್, ಅಜಿತ್ ಆಚಾರ್ಯ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here