ಲೋಕ ರಕ್ಷಣೆಗಾಗಿ ಯೇಸುಸ್ವಾಮಿ ಮೃತ್ಯುಂಜಯರಾದ ದಿನವೇ ಪುನರುತ್ಥಾನದ ರವಿವಾರ

0
48

ಪ್ರವಾದನೆಯ ಮುಂಗಾಣ್ಕೆಯಂತೆ ಧರ್ಮ ಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಪರಿಶುದ್ದ ರಕ್ತದಿಂದ ಸಮಸ್ತ ಮಾನವ ಕುಲಕೋಟಿಯ ಪಾಪ ನಿವಾರಣೆ ಸಾಧ್ಯವಾಗಿತ್ತು. ೨೦೨೪ ವರ್ಷಗಳ ಹಿಂದೆ ಯೇಸು ಕ್ರಿಸ್ತನು ಶುಭ ಶುಕ್ರವಾರ ದಿನ ಮನುಷ್ಯರ ಪಾಪ ನಿವಾರಣೆಗಾಗಿ ಕ್ರೂಜೆಯ ಮೇಲೆ ತನ್ನ ಪರಿಶುದ್ಧ ರಕ್ತ ಸುರಿಸಿ, ಸತ್ತು ಸಮಾಧಿಯಲ್ಲಿ ಹಾಕಲ್ಪಟ್ಟಿದ್ದನು, ರವಿವಾರ ಸಬ್ಬತ ದಿನವಾದ್ದರಿಂದ ಮಗ್ಗಲದ ಮರಿಯಳು, ಸೀಮೋನ ಪೇತ್ರ ಮತ್ತೊಬ್ಬ ಶಿಷ್ಯನು ಸುಗಂಧ ದ್ರವ್ಯಗಳೊಂದಿಗೆ ಸಮಾಧಿಗೆ ಸಲ್ಲಿಸಲು ಬಂದಿದ್ದರು. ಯೇಸುವಿನ ದೇಹ ಅಲ್ಲಿರದರಿಂದ ವಿಚಲಿತರಾದರು. ಆಗ ಶ್ವೇತ ವಶ್ತ್ರಧಾರಿಗಳಾದ ಇಬ್ಬರು ದೇವದೂತರು ಪ್ರತ್ಯಕ್ಷವಾಗಿ ….ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನೂ; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸ್ಪಟ್ಟನು. (– ೧ ಕೊರಿಂಥ – ೧೫ – ೪) ಎಂಬ ಸತ್ಯ ನಿಮಗೆ ತಿಳಿಯದೋ ಎಂದು ನೆನಪಿಸುವಷ್ಟರಲ್ಲಿ ಯೇಸು ಸ್ವಾಮಿ ಸ್ವತಃ ಮುಖದರ್ಶನ ನೀಡಿ ತಾನು ಪುನರುತ್ಥಾನ ವಾಗಿರುವ ಕುರಿತು ತನ್ನ ಶಿಷ್ಯ ಕೋಟಿಗೆ ಈ ಸತ್ಯ ತಿಳಿಸಲು ಹೇಳಿದನು. ಹಾಗಾಗಿ ಯೇಸು ಸ್ವಾಮಿ ಸಮಾಧಿಯಿಂದ ಎದ್ದು ಬಂದು ಮರಣವನ್ನು ಗೆದ್ದಿರುವ ಮೃತ್ಯುಂಜಯ ದೇವರಾಗಿರುವರು. ನಿಜವಾದ ದೇವಕುಮಾರನಾಗಿರುವನು. ಯೇಸು ಪ್ರಭು ಪ್ರಪಂಚದ ಸಮಸ್ತ ಜನರಿಗೆ ಪುನರುಜ್ಜೀವನ ನೀಡಲು ಸಾವನ್ನು ಗೆದ್ದ ದಿನವನ್ನು ಪುನರುತ್ಥಾನ ಭಾನುವಾರವೆಂದು ಜಗತ್ತಿನ ಎಲ್ಲಾ ದೇಶಗಳಲ್ಲಿ ಆಚರಿಸುತ್ತಾರೆ. ಈ ಪುನರುತ್ಥಾನ ಮತ್ತು ಸಮಸ್ತ ಜನರು ರಕ್ಷಣೆಗಾಗಿ ಏನೆಲ್ಲ ಮಾಡಬೇಕಾಗಿದೆಂಬುದನ್ನು ಸತ್ಯವೇದದ ಸತ್ಯವಾಕ್ಯಗಳ ದರ್ಶನದ ಸಹಿತ ಸುಭವಾರ್ತೆ ಧ್ಯಾನದೊಂದಿಗೆ ಚಿಂತನ ಮಂಥನ ಮಾಡೋಣ:-

ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು” (ಯೋಹಾನ. 11:25)

ಕರ್ತನಾದ ಯೇಸು ಕ್ರಿಸ್ತನು ಕ್ರೂಜೆಯ ಮೇಲೆ ಸತ್ತು ಮರಣದ ಮೇಲೆ ಜಯಿ ಹೊಂದಿದನು. ಆತನು ಸತ್ತವರೊಳಗಿಂದ ಎದ್ದು ಬಂದು ತನ್ನ ಆತ್ಮದ ಮೂಲಕ ನಮ್ಮಲ್ಲಿ ನೆಲೆಸುತ್ತಾನೆ. ನಮ್ಮಲ್ಲಿ ವಾಸ ಮಾಡುವ ಆತನ ಆತ್ಮನ ಮೂಲಕ, ಆತನು ನಮ್ಮ ಮರ್ತ್ಯ ದೇಹಗಳನ್ನು ಸಹ ಬದುಕಿಸುವನು (ರೋಮ. 8:11). ಇಂದು, ನಮಗೆ ನೂತನ ಜೀವಿತ ನೀಡಲು ಆತನ ಪುನರುತ್ಥಾನದ ಶಕ್ತಿಯೇ ಸಾಕಾಗಿದೆ. ಆದ್ದರಿಂದ, ನೀವು ನಿಮ್ಮ ದೇಹದಲ್ಲಿ ಪೀಡಿತರಾಗಿದ್ದು, ನಿಮ್ಮ ಆತ್ಮದಲ್ಲಿ ಮನ ಭಾರಗಳಿಂದ ಕುಗ್ಗಿಸಲ್ಪಟ್ಟು ಇನ್ನಿತರ ಹೊರೆಗಳಿಂದ ಬಾಧಿತರಾಗಿದ್ದರೆ ಚಿಂತಿಸಬೇಡಿರಿ. ಕರ್ತನು ನಿಮಗೆ ಬಲ, ರಕ್ಷಣೆ ಮತ್ತು ನೂತನ ಜೀವಿತವನ್ನು ನೀಡುವನು (ಕೀರ್ತ. 27:1). ಮೊರೆಯಿಡುತ್ತಾ ಆತನನ್ನು ದೃಷ್ಟಿಸಿ ನಿಮ್ಮ ಎಲ್ಲಾ ಮನ ಭಾರಗಳನ್ನು ಆತನಲ್ಲಿ ಹಾಕಿರಿ. ನೀವು ಸಹ ಪುನರುತ್ಥಾನದ ಶಕ್ತಿಯಿಂದ ಬಲಹೊಂದುವಿರಿ ಮತ್ತು ಆತನು ನಿಮ್ಮ ಜೀವಿತವನ್ನು ಬದಲಾಯಿಸುವನು (ಕೊಲೊ. 2:13). ನೀವು ಆತನನ್ನು ಕರೆದಾಗಲೆಲ್ಲಾ ನಿಮ್ಮನ್ನು ಕಾಪಾಡಲು ಆತನು ನಿಮ್ಮ ಕಡೆ ಬರುತ್ತಾನೆ (2 ಥೆಸ. 2:16).

“ಹೀಗಿರುವದರಿಂದ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ”. (1 ಕೊರಿ. 13:13)

ಕ್ರೈಸ್ತ ಜೀವನಕ್ಕೆ ಮೂರು ಮುಖ್ಯವಾದ ಅಂಶಗಳಿವೆ. ಅವು ನಂಬಿಕೆ, ನಿರೀಕ್ಷೆ, ಪ್ರೀತಿ. ಅವುಗಳ ಮೂಲಕವೇ ಒಬ್ಬ ವ್ಯಕ್ತಿ ದೈವಾಶೀರ್ವಾದಗಳನ್ನು ಹೊಂದಿಕೊಳ್ಳಲು ಸಾಧ್ಯ. ನಂಬಿಕೆ ಇಲ್ಲದ ಜೀವನದಿಂದ ಕ್ರಿಸ್ತನಲ್ಲಿ ಜೀವಿಸಲಾರೆವು. ನಂಬಿಕೆ, ನಿರೀಕ್ಷೆ ಪ್ರೀತಿ ಕ್ರಿಸ್ತನಲ್ಲಿ ಬೇರೆ ಬೇರೆಯಾಗಿರುವದಿಲ್ಲ ಮೂರು ಒಂದಾಗಿರುತ್ತವೆ. ಇಂದು ಅನೇಕ ಕುಟುಂಬಗಳಲ್ಲಿ, ಸಭೆಗಳಲ್ಲಿ ದೇವರ ಪ್ರಸನ್ನತೆ ಇರುತ್ತಿಲ್ಲ. ಏಕೆಂದರೆ ದೇವರ ಸಭೆಗಳಲ್ಲಿ ಭೇದ, ಕಳವಳ, ಕ್ರೋಧ ಉಂಟಾಗಿ ಶಾಂತಿ ಇಲ್ಲದ ಜೀವನ ಜೀವಿಸುತ್ತಿದ್ದಾರೆ. ಆದರೆ ದೈವ ಭಕ್ತಿಯ ಜೀವನದಲ್ಲಿ ನಾವು ನೋಡಿದರೆ ಪ್ರೀತಿ ನಿರೀಕ್ಷೆ ವಿಶ್ವಾಸ ಎಂಬ ದೈವೀಕ ಗುಣಗಳು ಅವರು ಹೊಂದಿರುವದರ ಮೂಲಕ ಅನೇಕ ಮಂದಿ ಜನರಿಗೆ ಆಶೀರ್ವಾದಕರವಾದ ಜೀವನ ಜೀವಿಸಿದರು.

“ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು” (ಯೆಶಾ. 66:13)

‌‌‌‌‌ತಾಯಿಯ ಪ್ರೀತಿ ಅದ್ವೀತಿಯವಾದದ್ದು. ತನ್ನ ಮಗುವನ್ನು 9 ತಿಂಗಳ ಕಾಲ ತನ್ನ ಗರ್ಭದಲ್ಲಿ ಹೊತ್ತ ತಾಯಿ ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಅದನ್ನು ಪ್ರೀತಿಸುತ್ತಾಳೆ. ಅವಳು ಯಾವ ವಿಧವಾದ ಆಪತ್ತು ಮಗುವಿನ ಹತ್ತಿರ ಬರ ಬಿಡುವುದಿಲ್ಲ ಮತ್ತು ಅದರ ಭಾದೆಗಳನ್ನು ಅವಳಿಗೆ ಸಹಿಸಲು ಆಗುವುದಿಲ್ಲ. ಕೆಲವು ಸಾರಿ, ಕೆಲವು ತಾಯಂದಿರು ಹೊಸದಾಗಿ ಮದುವೆ ಆಗಿರುವ ಮಗನು ತಮ್ಮವನು ಎಂಬ ಅಧಿಕಾರದಿಂದ ತಾನು ತಯಾರು ಮಾಡಿರುವ ಆಹಾರವನ್ನು ತಿನ್ನಬೇಕು ಎಂದು ಇಷ್ಟಪಡುವುದರ ಮೂಲಕ ಕುಟುಂಬಗಳಲ್ಲಿ ತೊಂದರೆಯನ್ನು ಉಂಟುಮಾಡುತ್ತಾರೆ. ಈ ಎಲ್ಲಾ ತೊಂದರೆಗಳಿಗೆ ಕಾರಣವೆಂದರೆ, ತಾಯಿಯ ಎಣೆಯಿಲ್ಲದ ಪ್ರೀತಿ. ಆದರೆ ಯೇಸು ಕ್ರಿಸ್ತನ ಪ್ರೀತಿ, ಈ ತಾಯಿ ಪ್ರೀತಿಗಿಂತಲೂ ದೊಡ್ಡದಾಗಿರುತ್ತದೆ (1 ಯೋಹಾ. 4:8-16). ಕೆಲವು ಸಲ, ತಾಯಂದಿರು ಪ್ರೀತಿಯ ಕೊರತೆಯಿಂದ ಮಕ್ಕಳಿಗೆ ಮೋಸ ಮಾಡಬಹುದು. ನಾವು ವಾರ್ತಾಪತ್ರಿಕೆಯಲ್ಲಿ ಓದುತ್ತೇವೆ, ಕೆಲವು ತಾಯಂದಿರು ಆಸ್ತಿ ಲಾಭಕ್ಕಾಗಿ ತಮ್ಮ ಸ್ವಂತ ಮಗನನ್ನೇ ಕೊಂದಿರುವ ವಿಷಯವನ್ನು ಹೌದು! ಈ ದಿನಗಳಲ್ಲಿ ತಾಯಿಯ ಪ್ರೀತಿ ಕಡಿಮೆ ಆಗುತ್ತಿರುವುದನ್ನು ನೋಡುತ್ತೇವೆ. ಆದರೆ, ದೇವರ ಪ್ರೀತಿ ಎಂದಿಗೂ ಬದಲಾಗದು. ನಾವು ಕಷ್ಟದಲ್ಲಿರುವಾಗ ನಮ್ಮ ಪ್ರಿಯ ಕರ್ತನು ನಮ್ಮ ಹತ್ತಿರ ಓಡಿ ಬಂದು ನಮ್ಮನ್ನು ಸಂತೈಸುತ್ತಾನೆ (ಯೆಶಾ. 49:15).

*ದೇವರು ನಿಜಕ್ಕೂ ನಿಮಗೆ ಗೌರವ ಮತ್ತು ಮಹಿಮೆಯನ್ನು ಸರಿಯಾದ ಸಮಯದಲ್ಲಿ ಕೊಟ್ಟು ನಿಮ್ಮನ್ನು ಸಂತೋಷಪಡಿಸುತ್ತಾನೆ (1 ಪೇತ್ರ. 2:20).

“ಈ ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ; ನಾನು ಲೋಕವನ್ನು ಜಯಿಸಿದ್ದೇನೆ” (ಯೋಹಾ. 16:33).

ಈ ಲೋಕದಲ್ಲಿ, ಸಂಕಷ್ಟಗಳಿಂದ, ಬಾಧೆಗಳಿಂದ ಮತ್ತು ಅನಿರೀಕ್ಷಿತವಾದ ಶ್ರಮೆಗಳಿಂದ ಬಾಧಿತರಾಗಿರುವದು ಸಾಮಾನ್ಯವಾದ ಸಂಗತಿಯಾಗಿದೆ. ಇದರಿಂದಾಗಿ, ಅನೇಕರು ಮನಗುಂದಿದವರಾಗಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಆದರೆ, ಈ ಎಲ್ಲಾ ಬಿಕ್ಕಟ್ಟಿನ ಸಮಯದಲ್ಲೂ ಸಹ ನಾವು ಧೈರ್ಯಗೊಂಡು ಪ್ರತಿಯೊಂದು ಶೋಧನೆ ಹಾಗೂ ಸಂಕಷ್ಟಗಳನ್ನು ಜಯಿಸಬೇಕೆಂದು ನಮ್ಮ ಕರ್ತನು ಇಚ್ಛಿಸುತ್ತಾನೆ. ಪ್ರಿಯರೇ, ನಮ್ಮ ಎಲ್ಲಾ ಹೊರೆಗಳನ್ನೂ, ಕಷ್ಟಗಳನ್ನೂ ಕ್ರೂಜೆಯ ಮೇಲೆ ಹೊತ್ತುಕೊಂಡು ಜಯ ಹೊಂದಿದ ಯೇಸುವನ್ನು ದೃಷ್ಟಿಸಿ ನೋಡಿರಿ (ಕೀರ್ತ. 121:1-2). ಆತನು ನಿಮ್ಮನ್ನು ಎಲ್ಲಾ ಸಮಯದಲ್ಲಿ, ಸಹಾಯ ನೀಡಿ ನಿಮಗೆ ಬೇಕಾದ ಜಯವನ್ನು ಕೊಡುವನು. ನಮ್ಮ ಕರ್ತನು ಅರಣ್ಯದಲ್ಲಿ ಸೈತಾನನಿಂದ ಶೋಧಿಸಲ್ಪಟ್ಟಾಗ, ಆತನು ದೇವರ ವಾಕ್ಯದಿಂದ ಸೈತಾನನ್ನು ಜಯಿಸಿದನು (ಮತ್ತಾ. 4:1-11). ಅದು ಮಾತ್ರವಲ್ಲದೆ, ಆತನು ತನ್ನ ಪರಲೋಕದ ತಂದೆಯಲ್ಲಿ ನೆಲೆಗೊಂಡಿದ್ದನು (ಯೋಹಾ. 10:30). ಮತ್ತು ಆತನಿಂದ ಬಲಪಡಿಸಲ್ಪಟ್ಟಿದ್ದನು. ಮೇಲಿನಿಂದ ಬಂದ ಈ ದೈವೀಕ ಶಕ್ತಿಯಿಂದ ಆತನು ತನ್ನ ಭೂಲೋಕ ಕಾಲದ ಅಂತ್ಯಕ್ಕೂ, ದೇವರ ಚಿತ್ತವನ್ನು ಪೂರೈಸಿದನು (ಮತ್ತಾ. 14:23, ಮಾರ್ಕ. 1:35, ಲೂಕ. 6:12, 22:44, ಇಬ್ರಿ. 5:7). ಹೀಗೆಯೇ, ನೀವು ಸಹ ದೇವರಿಗೆ ಪ್ರಾರ್ಥನೆ ಮಾಡಿ ಆತನಲ್ಲಿ ನೆಲೆಗೊಳ್ಳಿರಿ. ದೇವರು ನಿಮ್ಮ ಮನ ಕುಗ್ಗುವಿಕೆಯನ್ನು ಮಾರ್ಪಡಿಸಿ, ನಿಮ್ಮನ್ನು ಬಲಪಡಿಸಿ ಜಯಭರಿತ ಜೀವಿತ ಜೀವಿಸಲು ನಡೆಸುವನು.

“ಯೆಹೋವನು ವಿಮೋಚಿಸಿದವರು ಹಿಂತಿರುಗಿ ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿ ಹೋಗುವವು” (ಯೆಶಾ. 35:10).

ನಮ್ಮ ದಿನ ನಿತ್ಯದ ಜೀವನದಲ್ಲಿ, ಅನೀರಿಕ್ಷಿತ ಘಟನೆಗಳು ಮುಖ ಮತ್ತು ಬಾಧೆಗಳು ಉಂಟಾಗುತ್ತದೆ. ನೆನಸಲಾಗದಂತೆ ನಾವು ಸಮಾಧಾನ, ಸಂತೋಷ ಮತ್ತು ಆಶೀರ್ವಾದಗಳು ಮಾಯವಾಗಿಬಿಡುತ್ತದೆ. ಇಂಥಹ ಸಮಯಗಳಲ್ಲಿ, ನಾವು ಹೌದು ಹೋಗುವ ನಮ್ಮ ಹೋರಾಟ ಮತ್ತು ಬಾಧೆಗಳು ಯಾರೂ ಅರ್ಥಮಾಡಿಕೊಳ್ಳುವದಿಲ್ಲ. ಆದರೆ, ದೇವರ ಮಕ್ಕಳು ದೇವರು ಅವರನ್ನು ನಿಜಕ್ಕೂ ರಕ್ಷಿಸುವದರಿಂದ ನಾವು ಎದೆಗುಂದಬೇಕಾಗಿಲ್ಲ (ಕೀರ್ತ. 37:9). ದಾವೀದನು ಕೈಬಿಡಲ್ಪಟ್ಟವನಾಗಿ, ಎಲ್ಲಾ ಕಡೆಯಿಂದ ಒತ್ತಡ ಉಂಟಾದಾಗ, ಸಹಾಯ ಬರುವ ಪವರ್ತದ ಕಡೆ ಮೇಲೆ ನೋಡಿದನು (ಕೀರ್ತ. 121:1). ಆತನು ದೇವರನ್ನು ನೋಡಿ ಧೈರ್ಯ, ನಂಬಿಕೆಯಿಂದ ಕರ್ತನಲ್ಲಿ, ತನ್ನಲ್ಲಿ ತಾನೇ ಬಲಹೊಂದಿ, ಕಳೆದದ್ದೆಲ್ಲವನ್ನು ಹಿಂತಿರುಗಿ ಪಡೆದನು (1 ಸಮು. 30:6-19)

“ನೀವು ಪೂರ್ಣ ವಿನಯ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ”. (ಎಫೆ. 4:2).

“ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನು ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನು ದಮೆಗೆ ತಾಳ್ಮೆಯನ್ನು ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರ ಸ್ನೇಹವನ್ನು ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ”. (2 ಪೇತ್ರ. 1:5-7).

“ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವುದಿಲ್ಲ. ಆ (ಯೇಸು ಸ್ವಾಮಿ) ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ” (ಅ.ಕೃ. 4:12).

ಈ ಪ್ರಪಂಚದಲ್ಲಿ ನಾವು ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಕರ್ತನಾದ ಯೇಸು ಇದೆಲ್ಲವನ್ನು ಶಿಲುಬೆಯ ಮೇಲೆ ಜಯಿಸಿ ಜಯಪಡೆದವನೆಂದು ನಮಗೆ ಗೊತ್ತಿರಬೇಕು. ಆದ್ದರಿಂದಲೇ, ಯೋಹಾನ 16:33 ಹೀಗೆ ಹೇಳಿದನು “ಲೋಕದಲ್ಲಿ ನಿಮಗೆ ಸಂಕಟ ಉಂಟು ಧೈರ್ಯವಾಗಿರಿ; ನಾನು ಲೋಕವನ್ನು ಜಯಿಸಿದ್ದೇನೆ” ಎಂದು. ನಾವು ನಮ್ಮ ಮನಸ್ಸಿನಲ್ಲಿ ಬೇಕಿಲ್ಲದ ಭಯಗಳನ್ನು ಆಲೋಚಿಸಿ ಚಿಂತಿಸಲು ಆರಂಭಿಸುತ್ತೇವೆ. ಈ ದಿನ, ಇವುಗಳೆಲ್ಲವನ್ನು ಜಯಿಸಲು ಶಕ್ತಿ ಹೊಂದಿರುವ ಕರ್ತನನ್ನು ನೋಡಿ ನಮಗೆ ಜಯವನ್ನು ಕೊಡುವಂತೆ ಪ್ರಾರ್ಥಿಸೋಣ (1 ಕೊರಿ. 15:57).

“ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು” (1 ಯೋಹಾ. 1:9)

ಸತ್ಯವೇದ ಹೇಳುತ್ತದೆ, ನಾವು ಅಜ್ಞಾನದಿಂದ ಅನೇಕ ತಪ್ಪುಗಳನ್ನು ಮಾಡಿ ನಮ್ಮ ಜೀವನದಲ್ಲಿ ಅನೇಕ ರೀತಿಯಾಗಿ ಬೀಳುತ್ತೇವೆ (ಯಾಕೋ. 3:2). ನಮ್ಮ ಕರ್ತನಾದ ಯೇಸು ಹೇಳಿದನು, ಈ ಪ್ರಪಂಚದಲ್ಲಿ ಒಬ್ಬರಾದರೂ ಸಮಗ್ರನಾದ ಮನುಷ್ಯನೇ ಇಲ್ಲ. ಇಂಥಹ ಪರಿಸ್ಥಿತಿಯಲ್ಲಿ ಯಾರು ಹೇಳಬಹುದು, “ನಾನು ಸಂಪೂರ್ಣ ಮನುಷ್ಯ ಎಂದು”. ಅದಕ್ಕೆ ಬದಲಾಗಿ ಮೊಣಕಾಲು ಹಾಕಿ ಅರಿಕೆ ಮಾಡಬೇಕು, “ಕರ್ತನೇ! ನನ್ನ ಎಲ್ಲಾ ಪಾಪಗಳನ್ನು, ಕೊರತೆಗಳನ್ನು ಕ್ಷಮಿಸು. ನಿನ್ನ ರಕ್ತದಿಂದ ನನ್ನನ್ನು ಶುದ್ಧಿಮಾಡು” ಎಂದು (1 ಯೋಹಾ. 1:7). ಮೇಲೆ ಕೊಟ್ಟಿರುವ ವಾಗ್ದಾನದ ವಚನದ ಪ್ರಕಾರ, ಆತನು ನಿನ್ನ ಎಲ್ಲಾ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿಯಿಂದ ಶುದ್ಧ ಮಾಡುವನು.

“ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಅನುಭವಿಸಿದನು. ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು! ನಾವಾದರೂ ಅವನು ಭಾದಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು” (ಯೆಶಾ. 53:4).

ಹೌದು! ನಮ್ಮ ಕರ್ತನಾದ ಯೇಸು ಕ್ರಿಸ್ತನು ನಮ್ಮ ಪಾಪಗಳನ್ನು ಹೊತ್ತು ತನ್ನನ್ನು ತಾನೇ ಶಿಲುಬೆಯ ಮೇಲೆ ಜಡಿಸಿಕೊಂಡು, ನಮ್ಮ ಭಾರಗಳು ಮತ್ತು ಭಾದೆಗಳನ್ನು ಪರಿಹರಿಸಿ ನಮ್ಮನ್ನು ಸಮೃದ್ಧಿಯ ಜೀವನದಿಂದ ಆಶೀರ್ವದಿಸಿದ್ದಾನೆ. ಸತ್ಯವೇದ ಸ್ಪಷ್ಟವಾಗಿ ಹೇಳುತ್ತದೆ, ಆತನು ಎಷ್ಟೊಂದು ನೋವು ಮತ್ತು ಯಾತನೆಗಳನ್ನು ಅನುಭವಿಸಬೇಕಾಯಿತೆಂದು. ಮೊದಲು, ಆತನನ್ನು ಒಂದು ಕಮ್ಮಿಯಾಗಿ ನಲವತ್ತು ಛಡಿ ಏಟುಗಳನ್ನು ಆತನ ಬೆನ್ನ ಮೇಲೆ ಕೊಟ್ಟರು ಮತ್ತು ಆತನ ದೇಹ ಗಾಯಗೊಂಡಿತು. ಕೊನೆಗೆ, ಆತನ ಕೈಕಾಲುಗಳಲ್ಲಿ ಮೊಳೆಯಿಂದ ಶಿಲುಬೆಗೆ ಜಡಿಯಲಾಯಿತು. ಓಹ್! ಎಂಥಹ ಯಾತನೆ ಮತ್ತು ನೋವಾಗಿತ್ತು! ಈ ಎಲ್ಲಾ ಭಯಂಕರವಾದ ಚಿತ್ರಹಿಂಸೆಯನ್ನು “ಆತನ ಮೂಲಕ ನಾವು ಜೀವಿಸುವಂತೆ” ಆತನು ತಾಳಿದನು (1 ಯೋಹಾ. 4:9). ಇದರಿಂದ ನಮಗೆ ಯಾವ ಆಶೀರ್ವಾದ ಸಿಗುತ್ತದೆ? ಹೌದು! ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ (ರೋಮ. 8:36-37). ಆತನು ಸತ್ತು ನಮಗೆ ಜಯದ ಜೀವನವನ್ನು ಕೊಟ್ಟಿದ್ದಾನೆ. ಎಂದು ನಾವು ಮರೆಯಬಾರದು. ಏನೇ ಆದರೂ ನಾವು ದೃತಿಗೆಡಬೇಕಾಗಿಲ್ಲ! ಯಾವಾಗಲೂ ಶಿಲುಬೆಯನ್ನು ನೋಡಿರಿ! ಜಯ ನಮ್ಮದೇ.

“ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಆಧಾರ” (ಜ್ಞಾನೋ. 24:3).

ಪ್ರಿಯರೇ, ನಮ್ಮ ದೇವರು ಜ್ಞಾನದ ಮೂಲ. ಈ ಯೌವನಸ್ಥ ಹುಡುಗಿಗೆ ಮಾಡಿದಂತೆ ನೀವೂ ಪ್ರಾರ್ಥನಾ ಜೀವಿತವನ್ನು ಮತ್ತು ದೈವತ್ವದ ಜೀವನ ನಡೆಸಿದರೆ ಆತನು ನಿಮ್ಮನ್ನು ಜ್ಞಾನದಿಂದ ತುಂಬಿಸುತ್ತಾಣೆ (ರೋಮ. 11:33). ದೇವರು ಪಕ್ಷಪಾತಿಯಲ್ಲ, ವ್ಯಕ್ತಿಗಳನ್ನು ತಾರತಮ್ಯ ಮಾಡುವುದಿಲ್ಲ. ಆತನು ನಿನ್ನ ಪ್ರಾರ್ಥನೆಯನ್ನು ಕೇಳಿ ದೈವೀಕ ಜ್ಞಾನ ಕೊಟ್ಟು ಆಶ್ಚರ್ಯವಾಗಿ ಆಶೀರ್ವದಿಸುತ್ತಾನೆ.

“ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕ ರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ, ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೆ” (ಮತ್ತಾ. 7:21).

ಈ ಪ್ರಪಂಚದಲ್ಲಿ ಅನೇಕ ಜನರು ದೇವರ ಚಿತ್ತವನ್ನು ಹೇಗೆ ತಿಳಿದುಕೊಳ್ಳುವದು ಎಂದು ಆಶ್ಚರ್ಯಪಡುತ್ತಾರೆ. ಅವರು ದೇವರ ಚಿತ್ತದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಆದರೆ, ನಿಮ್ಮ ಕರ್ತನಾದ ಯೇಸು ದೇವರ ಪ್ರಿಯ ಮಗನಾಗಿದ್ದರೂ, ತನ್ನನ್ನು ತಾನೇ ಯಜ್ಞವಾಗಿ ಅರ್ಪಿಸಿಕೊಳ್ಳಬೇಕಾಗಿ ಬಂದಾಗ, ಆತನು ಸಹ ಕೂಗಿಕೊಂಡನು, “ತಂದೆಯೇ, ನನ್ನ ಚಿತ್ತವಲ್ಲ, ನಿನ್ನ ಚಿತ್ತ ನೆರವೇರಲಿ (ಲೂಕ. 22:42). ಹೀಗೆಯೇ, ನಾವು ಸಹ ದೇವರ ಚಿತ್ತವನ್ನು ತಿಳಿದುಕೊಳ್ಳಬೇಕಾದರೆ ನಾವು ದೇವರಿಗೆ ಸಮರ್ಪಿಸಿಕೊಳ್ಳಬೇಕು. ಆತನು ನಮ್ಮ ಕೈಗಳನ್ನು ಆತನ ಹಸ್ತಗಳಲ್ಲಿ ತೆಗೆದುಕೊಂಡು ಆತನ ಚಿತ್ತದಂತೆ ನಮ್ಮನ್ನು ನಡೆಸುತ್ತಾನೆ. ನಿಮ್ಮ ಆಲೋಚನೆಯಂತೆ ಎಂದಿಗೂ ಏನನ್ನು ಮಾಡಬೇಡ. ಎಂದಿಗೂ ಹೇಳಬೇಡ ಎಂದು. “ನನ್ನ ಇಷ್ಟದಂತೆ ದೇವರು ಮಾಡಲಿ” ಎಂದು. ಇದು ಕೇವಲ ತೊಂದರೆಗಳಿಗೂ ಮತ್ತು ಹೋರಾಟಗಳಿಗೂ ದಾರಿ ಮಾಡಿ ಕೊಡುತ್ತದೆ. ನಮ್ಮ ಕರ್ತನಾದ ಯೇಸು, ದೇವರ ಮಗನು ನಮ್ಮ ಮುಂದೆ ಒಂದು ದೃಷ್ಟಾಂತವಿಟ್ಟಿದ್ದಾನೆ. ಕರ್ತನು ಏನು ಮಾಡಬೇಕೆಂದು ಅಪೇಕ್ಷಿಸಿದನೂ ಅದನ್ನು ಮಾಡಿ ಶಿಲುಬೆಯ ಮೇಲೆ ಸತ್ತನು. ಆದ್ದರಿಂದ ಯಾರು ದೇವರ ಚಿತ್ತವನ್ನು ಮಾಡುತ್ತಾರೋ ಆತನಲ್ಲಿ ಎಂದೆಂದಿಗೂ ನೆಲೆಸುತ್ತಾನೆ (1 ಯೋಹಾ. 2:17).

“ಜನಾಂಗಗಳಲ್ಲಿ ಆತನ ಘನತೆಯನ್ನು ಎಲ್ಲಾ ಜನರಲ್ಲಿ ಆತನ ಅದ್ಭುತ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ”. (1 ಪೂರ್ವ. 16:24).

ಪ್ರಿಯರೇ! ನಾವು ಕೊನೆಯ ದಿನಗಳಲ್ಲಿದ್ದೇವೆ. ಆದ್ದರಿಂದ ನಾವು ಕರ್ತನಿಗೆ ಮಹಿಮೆ ತರುವಂತಹ ಜೀವಿತವನ್ನು ಸ್ಪಷ್ಟವಾಗಿ ಜೀವಿಸಬೇಕು. ಗುರಿ ಇಲ್ಲದ ಜೀವಿತವನ್ನು ಜೀವಿಸುತ್ತಿರುವ ಪ್ರತಿಯೊಬ್ಬರು ಮತ್ತು ನಿಮ್ಮ ಮನಸ್ಸಿಗೆ ತೋಚಿದಂತೆ ದಾರಿಯಲ್ಲಿ ನಡೆಯುತ್ತಿರುವವರು, ಈಗಲೇ ಪಶ್ಚಾತ್ತಾಪವನ್ನು ಪಡುತ್ತಾ ಕರ್ತನನ್ನು ಬೇಗನೇ ಹಿಡಿದುಕೊಳ್ಳುವಂತಹ ಜೀವಿತವನ್ನು ಜೀವಿಸಿರಿ. ನಿಮ್ಮ ಎಲ್ಲಾ ಆಸೆಗಳನ್ನು ಹಾಗೂ ಭೋಗಾಪೇಕ್ಷೆಗಳನ್ನು ಶಿಲುಬೆಯಲ್ಲಿ ಹಾಕಿರಿ ಮತ್ತು ನಿಜವಾದ ಕ್ರೈಸ್ತ ಜೀವಿತವನ್ನು ಜೀವಿಸಿರಿ, ಆದರೆ ಎಂದಿಗೂ ಇದನ್ನು ನಿಲ್ಲಿಸದಿರಿ. ಪಾಪಿಗಳು ನಿತ್ಯಜೀವವನ್ನು ಪಡೆಯಲೆಂದು ಶಿಲುಬೆಯಲ್ಲಿ ತನ್ನ ಜೀವವನ್ನು ತ್ಯಜಿಸಿದ ಯೇಸುಕ್ರಿಸ್ತನಿಗೆ ನಮ್ಮ ಜೀವಿತವನ್ನು ಅರ್ಪಿಸಿ ಆತನಂತೆ ಎದ್ದು ಪ್ರಕಾಶಿಸುವ ಪಾತ್ರೆಯಾಗೋಣವೆ? ಪರಲೋಕದ ತಂದೆಯೇ ! ನೀನು ನನಗೆ ಪ್ರಕಟಿಸಿರುವ ನಿನ್ನ ಸೇವೆಯನ್ನು ಮಾಡುವುದಕ್ಕಾಗಿ ನನ್ನನ್ನೇ ನಿನಗೆ ಅರ್ಪಿಸಿಕೊಳ್ಳುತ್ತೇನೆ. ನಿನ್ನ ನಾಮಕ್ಕೆ ಪ್ರಕಾಶವಾದ ಮಹಿಮೆ ತರುವಂತಹ ಕೃಪೆಯನ್ನು ನನಗೆ ನೀಡಿರಿ ಮತ್ತು ಬೇರೆಯವರ ಜೀವನದಲ್ಲಿ ಅದ್ಭುತ ಕಾರ್ಯಗಳನ್ನು ಮಾಡುವಂತಹ ಶಕ್ತಿಯನ್ನು ನನಗೆ ನೀಡಿರಿ. ಯೇಸುಕ್ರಿಸ್ತನ ಮುದ್ದಾದ ನಾಮದಲ್ಲಿ ಬೇಡಿಕೊಳ್ಳುತ್ತೇನೆ, ಆಮೆನ್.

ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆ ತಂದೆ (ಯೆಹೋವ), ಮಗ (ಯೇಸು) ಮತ್ತು ಪವಿತ್ರಾತ್ಮಾನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿರುವುದನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.

ಎಂದು ಮತ್ತಾಯ– ೨೮:೧೯-೨೦ರಲ್ಲಿ ಹೇಳಿರುವ ಪ್ರಕಾರ ಪ್ರಪಂಚದ ಎಲ್ಲಾ ದೇಶಗಳ ಎಲ್ಲಾ ನಗರ ಮತ್ತು ಹಳ್ಳಿಗಳಲ್ಲಿ ಹಲವಾರು ಅಡೆ ತಡೆಗಳ ಮಧ್ಯದಲ್ಲೂ ಸೇವೆಯು (ಸಾಮಾಜಿಕ ಡಿಜಿಟಲ್ ಜಾಲತಾಣಗಳು (ಆನ್ಲೈನ್) ಸಭೆ ಹಾಗೂ ಮನೆ ಮನೆಗಳಲ್ಲಿ) ಸಾಗುತಿದ್ದು; ನಾವೆಲ್ಲರೂ ಯುಗದ ಸಮಾಪ್ತಿಯ ಕಡೆ ದಿನಗಳಲ್ಲಿ ಇದ್ದು; ಮಾನಸಾಂತರ ಹೊಂದಿ, ಕ್ರಿಸ್ತನ ಸತ್ಯವಾಕ್ಯಕ್ಕೆ ವಿಧೇಯರಾಗಿ ದೀಕ್ಷೆ ತೆಗೆದುಕೊಂಡು, ಪಾಪಕ್ಕೆ ಸತ್ತು ನೀತಿಗೆ ಜಿವಿಸುವುರಾದರೆ ಖಂಡಿತವಾಗಿಯೂ ನಿತ್ಯ ಜೀವ ವೆಂಬ ಜಯಮಾಲೆಯೊಂದಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಸತ್ಯವೇದವು ಸಾವಿರಾರು ಸಲ ಪುನರಾವರ್ತಿಸಿ ಹೇಳುತ್ತದೆ. ಇಲ್ಲವಾದಲ್ಲಿ ಯೇಸುವಿನ ಎರಡನೇ ಬರೋವಣದಲ್ಲಿ ಪಾಪ ಕೃತ್ಯಗಳನ್ನು ಮಾಡಿರುವ ಜನರನ್ನು ನಿತ್ಯ ಬೆಂಕಿ ಗಮಧಕಗಳಿಂದ ಕುದಿಯುವ ನರಕಕ್ಕೆ ದೊಬ್ಬಲ್ಪಟ್ಟು ಅನಂತಕಾಲ ಬೊಬ್ಬೆ ಇಡಬೇಕಾದಿತು ಎಂಬ ಸತ್ಯವೇದದ ಮಾತನ್ನು ಅಲ್ಲಗಳೆಯುವಂತಿಲ್ಲ. ಈ ರಕ್ಷಣೆಯ ದಿನಗಳನ್ನು ನಗಣ್ಯವಾಗಿ ಕಾಣದೆ ಆತ್ಮಾವಲೋಕನ ಮತ್ತು ಸತ್ಯಾಸತ್ಯೆಗಳನ್ನು ಪರಾಮರ್ಶಿಸಿ ಸತ್ಯದೇವರನ್ನು ಕಂಡುಕೊಳ್ಳಲು ಇದು ಪರ್ವಕಾಲ. ಏಕೆಂದರೆ ಯೇಸು ಹೇಳುವ ಪ್ರಕಾರ ತಂದೆಯ (ಸೃಷ್ಟಿಕರ್ತ) ಬಳಿ ಹೋಗಲು ಯೇಸು ಹೇಳಿದೆನೆಂದರೆ ನಾನೇ ಮಾರ್ಗವೂ, ಸತ್ಯವೂ, ಜೀವವೂ ಅಗಿದ್ದೇನೆ; ನನ್ನ ಮೂಲಕವಾಗಿ ಹೊರತು, ಮತ್ತಾರು ತಂದೆ (ಸೃಷ್ಟಿಕರ್ತ) ಯ ಬಳಿ ಹೋಗಲು ಸಾಧ್ಯವಿಲ್ಲ. –(ಯೋಹಾನ -೧೪:೬) ಎಂಬುದನ್ನು ಮೊದಲು ಅರಿಯಬೇಕು. ಭೂಮಿಯ ಮೇಲಾಗಲಿ, ನೀರಿನ(ಜಲ)ಲ್ಲಾಗಲಿ, ಆಕಾಶದಲ್ಲಾಗಲಿ ಯಾವುದೇ ಉಪಕರಣದ ಸಹಾಯದಿಂದ ಪರಲೋಕ ರಾಜ್ಯ ಕಾಣಲು ಸಾಧ್ಯವಿಲ್ಲ ಎಂಬುದನ್ನು ವಿಮರ್ಶಿಸಿ ತಿಲಿದುಕೊಳ್ಳಬೇಕು. ನಮ್ಮ ಮುಂದೆ ಚಿಂತೆ, ಚಿಂತನೆ, ಚಿತೆ ಈ ಮುರು ಇದೆ. ನಾವು ಚಿಂತೆ ಎಂಬ ಚಿತೆಯೊಳಗೆ ಸುಟ್ಟು ಹೋಗದೆ, ಚಿಂತೆಯನ್ನು ಚಿಂತನೆಗೊಳಪಡಿಸಿ ಚಿತೆಯಿಂದ ಹೊರಬಂದು ನಮ್ಮ ಬದುಕು ಚಿನ್ನದಂತೆ ಫಲಫಳನೆ ಹೊಳೆವಂತೆ ದೇವರ ಉಚಿತಾರ್ಥ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ.

ಸುಹೇಚ ಪರಮವಾಡಿ
ಸುಭಾಷ್ ಹೇಮಣ್ಣಾ ಚವ್ಹಾಣ,
ವೈಚಾರಿಕ ಚಿಂತಕರು, ಹುಬ್ಬಳ್ಳಿ ಶಹರ,

LEAVE A REPLY

Please enter your comment!
Please enter your name here