ರಾಮ ಕ್ಷತ್ರಿಯ ವೃತ್ತಿಪರರ ಸಮಾವೇಶ-2026: ಸಂಘಟನೆಯ ಬಲವರ್ಧನೆಗೆ ಒಗ್ಗಟ್ಟು ಅಗತ್ಯ – ಜೆ. ಕೃಷ್ಣ ಪಾಲೆಮಾರ್

0
6

ಮಂಗಳೂರು : ಸಮುದಾಯದ ಒಗ್ಗಟ್ಟಿನ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ ಸದೃಢಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಸಂಘಟನೆಯ ಬಲವರ್ಧನೆಗೆ ನನ್ನ ಬೆಂಬಲ ಸದಾ ಇರಲಿದೆ ಎಂದು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಹೇಳಿದರು.

ಅವರು ಅ. 25ರಂದು ಮಂಗಳೂರಿನ ಜೆಪ್ಪು ಮಾರ್ಗನ್ ಗೇಟ್‌ನ ರಾಮ ಕ್ಷತ್ರಿಯ ಮಂದಿರದ ಸಭಾಂಗಣದಲ್ಲಿ ವಿಶ್ವ ರಾಮ ಕ್ಷತ್ರಿಯ ಮಹಾಸಂಘ (ರಿ.), ಕುಂದಾಪುರದ ಅಧ್ಯಕ್ಷ ಶಶಿಧರ್ ನಾಯಕ್ ಅವರ ನೇತೃತ್ವದಲ್ಲಿ ನಡೆದ ರಾಮ ಕ್ಷತ್ರಿಯ ವೃತ್ತಿಪರರ ಸಮಾವೇಶ-2026ಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಮಾವೇಶದ ಅಧ್ಯಕ್ಷತೆಯನ್ನು ಅಶೋಕ್ ಬೆಟ್ಟಿನ್ ವಹಿಸಿದ್ದರು. ಮಂಗಳೂರು ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಮುರಳೀಧರ ಸಿ.ಎಚ್., ಮಹಿಳಾ ಸಂಘದ ಅಧ್ಯಕ್ಷೆ ವಿನತ ನರೇಶ್ ಮಲ್ಲಿಗೆಮಾಡು ಹಾಗೂ ನಾಗರಾಜ್ ಕಾಮಧೇನು ಕುಂದಾಪುರ ಉಪಸ್ಥಿತರಿದ್ದರು.

ವೃತ್ತಿಪರರ ಸಮಾವೇಶದ ಉದ್ದೇಶವನ್ನು ಶ್ರೀಧರ್ ಪಿ.ಎಸ್. ವಿವರಿಸಿದರು. ವಿವಿಧ ಕ್ಷೇತ್ರಗಳ ವೃತ್ತಿಪರರು ಹಾಗೂ ಸಮುದಾಯದ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಕರುಣಾಕರ ರಾವ್, ಸುರೇಶ್ ಬೆಟ್ಟಿನ್, ವಾಮನ್ ರಾವ್ ಬೇಕಲ್, ಸಂಧ್ಯಾ ರಾಣಿ, ಡಾ. ರಾಜೇಶ್ ಬೇಕಲ್, ನ್ಯಾಯವಾದಿ ಅನಿಲ್ ಬೇಕಲ್, ಮಂಜುಳಾ ಅನಿಲ್ ರಾವ್, ವಾರಿಜಾ ಕೊರಗಪ್ಪ, ಜೆ.ಕೆ. ರಾವ್, ಯೋಗೀಶ್ ಕುಮಾರ್ ಜೆಪ್ಪು, ವೆಂಕಟೇಶ್ ಜೆಪ್ಪು, ದಯಾವತಿ, ನ್ಯಾಯವಾದಿ ರಾಘವೇಂದ್ರ ರಾವ್, ನ್ಯಾಯವಾದಿ ಶಾಲಿನಿ, ರೇಷ್ಮಾ, ಡಾ. ಅಪೂರ್ವ ರಾವ್, ರವೀಂದ್ರ ರಾವ್, ರಾಮಚಂದ್ರ, ಡಾ. ಪೃಥ್ವಿ ರಾವ್, ಸುಜಯ್ ರಾವ್, ಜಯಪ್ರಕಾಶ್, ರೇಖಾ ಸುದೇಶ್ ರಾವ್, ಶಿವರಾಮ ಕಾಸರಗೋಡು, ರಾಧಾಕೃಷ್ಣ ನಾಯಕ, ಪ್ರಕಾಶ್, ಪ್ರಕಾಶ್ ಬೆಟ್ಟಿನ್, ಕೊರಗಪ್ಪ, ಹೂವಯ್ಯ ಹಾಗೂ ರಂಜನ್ ಉಪಸ್ಥಿತರಿದ್ದರು.

ಮುರಳೀಧರ್ ಸಿ ಎಚ್ ಸ್ವಾಗತಿಸಿ, ನಾಗರಾಜ. ಕೆ. ಕುಂದಾಪುರ ಪ್ರಾಸ್ತಾವಿಕ ನುಡಿದರು. ರೇಖಾ ಸುದೇಶ್ ರಾವ್ ಪ್ರಾರ್ಥಿಸಿದರು. ನಾಗರಾಜ್ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಕುಮಾರ್ ವಂದಿಸಿದರು.