ಮೂಡುಬಿದಿರೆ ವಲಯ ಶಾಮಿಯಾನ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ರಮಾನಾಥ ಸಾಲ್ಯಾನ್ ಪಣಪಿಲ ಆಯ್ಕೆ

0
23

ಮೂಡುಬಿದಿರೆ : ವಲಯ ಶಾಮಿಯಾನ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎಸ್. ಎರೇಂಜರ್ಸ್ ಸಂಸ್ಥೆಯ ಮಾಲಕರಾದ ರಮಾನಾಥ ಸಾಲ್ಯಾನ್ ಪಣಪಿಲ ಅವರು ಆಯ್ಕೆಯಾಗಿದ್ದಾರೆ.

ಕಳೆದ ಎರಡು ದಶಕಗಳಿಂದ ವಿ.ಎಸ್. ಎರೇಂಜರ್ಸ್ ಮೂಲಕ ಜನಪ್ರಿಯರಾಗಿರುವ ರಮಾನಾಥ ಸಾಲ್ಯಾನ್ ಅವರು ತಮ್ಮ ಉದ್ಯಮದೊಂದಿಗೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ತಮ್ಮ ಪುತ್ರ ಅಶ್ವಥ್ ಪಣಪಿಲ ಸೇರಿದಂತೆ ಕುಟುಂಬದ ಸದಸ್ಯರನ್ನೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿರುವ ಅವರು, ಸ್ಥಳೀಯವಾಗಿ “ವಿ.ಎಸ್.” ಎಂದೇ ಚಿರಪರಿಚಿತರಾಗಿದ್ದು, ಸರ್ವಧರ್ಮೀಯರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.

ಪ್ರಚಾರದಿಂದ ಸದಾ ದೂರವಿರುವ ರಮಾನಾಥ ಸಾಲ್ಯಾನ್ ಅವರಿಗೆ ಇದೀಗ ಮೂಡುಬಿದಿರೆ ವಲಯ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಮಹತ್ವದ ಜವಾಬ್ದಾರಿಯಾಗಿದೆ. ಅವರ ನಾಯಕತ್ವದಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಸದಸ್ಯರು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದಾರೆ.