ಮಂಗಳಾ ಸಭಾಂಗಣದಲ್ಲಿ ‘ರಂಗ್ ಮಹಲ್’ ಸಾಂಸ್ಕೃತಿಕ ಸಂಜೆ

0
331


ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗವು ಆಯೋಜಿಸಿದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ಮ್ಯಾಗ್ನಮ್ ಪೆಸ್ಟ್ ಪ್ರಯುಕ್ತ ಮಂಗಳ ಗಂಗೋತ್ರಿ ಯ ಮಂಗಳಾ ಸಭಾಂಗಣದಲ್ಲಿ ರಂಗ್ ಮಹಲ್ ಸಾಂಸ್ಕೃತಿಕ ಸಂಜೆ ನಡೆಯಿತು.
ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಸ್ಪರ್ಧೆ ನಡೆಯಿತು. ನಂತರ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ನೃತ್ಯ ಮತ್ತು ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪ್ರಮುಖವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೃತ್ಯ ಅತ್ಯದ್ಬುತವಾಗಿತ್ತು. ಜಿಂಬಾಬ್ವೆ ದೇಶದ ವಿನ್ನಿ ಸಿಬೊಂಗೆಲೆ ಬಾಜಿಲಾ ರವರ ಹಾಡು ಎಲ್ಲರನ್ನು ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತೀರ್ಪುಗಾರರಾಗಿ ಸುವಿಕ್ಷಾ ಆರ್. ಭಂಡಾರಿ ಮತ್ತು ಸಹನಾ ಎಂ. ಶೆಟ್ಟಿ ನಿರ್ವಹಿಸಿದ್ದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ಡಾ. ಪರಮೇಶ್ವರ, ಡಾ. ಚಂದ್ರಮ್ಮ, ಡಾ. ದಿನಕರ, ರಶ್ಮಿತಾ ಆರ್. ಕೋಟ್ಯಾನ್, ಗುರುರಾಜ್ ಪಿ, ವೈಶಾಲಿ ಕೆ, ಸಿ. ಲಹರಿ, ರಮ್ಯ ರಾಮಚಂದ್ರ ನಾಯ್ಕ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ನಿರೂಪಣೆಯನ್ನು ನೆಲ್ಸನ್ ಮೋನಿಸ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here