ಜಗತ್ತಿನಾದ್ಯಂತ ಅತಿಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಒಂಬತ್ತು ವರ್ಷಗಳ ನಂತರ ಫೈನಲ್‌ಗೆ ಕಾಲಿಟ್ಟಿದೆ.
ಐಪಿಎಲ್ ನಲ್ಲಿ ಚರಿತ್ರೆಯನ್ನು ಸೃಷ್ಟಿ ಮಾಡಿರುವ ಜಗತ್ಪ್ರಸಿದ್ಧ ದಿಗ್ಗಜ ವಿರಾಟ್ ಕೊಹ್ಲಿ ಮುಖಂಡತ್ವದಲ್ಲಿ ನಾಯಕ ರಜತ್ ಪಟಿದಾರ್ ರವರ ಆರ್ ಸಿ ಬಿ ತಂಡ ನೆನ್ನೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಲು ಯಶಸ್ವಿಯಾಯಿತು.
ಸುಯಾಷ್ ಶರ್ಮಾ ಹಾಗೂ ಜ್ಯೂಷ್ ಏಂಜಲ್ ಹುಡ್ ಅವರ ಕೈಚಳಕದ ಅದ್ಭುತ ಬೌಲಿಂಗ್ ಎದುರಿಸಲು ಪಂಜಾಬ್ ಕಿಂಗ್ಸ್ ತಂಡ ಅಸಾಧ್ಯವಾಯಿತು. ಕೇವಲ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಪಂಜಾಬ್ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ನAತರ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಹಾಗು ಫೀಲ್ ಸಾಲ್ಟ್ ಭದ್ರ ಬುನಾದಿ ಹಾಕಿಕೊಟ್ಟರು ನಂತರ ಫಿಲ್ ಸಾಲ್ವ ಕೇವಲ 27 ಎಸೆತಗಳಲ್ಲಿ 56 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದು ಉತ್ತಮ ಪ್ರದರ್ಶನ ನೀಡಿದರು. ಅವರ ಅದ್ಭುತ ಆಟದಿಂದ ಆರ್‌ಸಿಬಿ ಫೈನಲ್‌ಗೆ ತಲುಪಿ ಅಭಿಮಾನಿಗಳ ಕನಸು ನನಸಾಗುವಂತೆ ಮಾಡಿತು.
ನಂಬಿಕೆಯೇ ನಮ್ಮ ಆಯುಧ ಎಂದು ತಿಳಿದ ಆರ್.ಸಿ.ಬಿ. ಯ ಈ ಅದ್ಭುತ ಐಪಿಎಲ್ ಪಯಣ ಫೈನಲ್ಸ್ ನಲ್ಲಿ ಕೂಡ ಮುಂದುವರಿಯಲಿ, ಗೆಲುವಿನ ಹಾದಿಯಲ್ಲಿ ಇತಿಹಾಸ ಸೃಷ್ಟಿಸುವ ಹಂಬಲದಲ್ಲಿ ಇರುವ ಆರ್‌ಸಿಬಿ ತಂಡ ಫೈನಲ್‌ನಲ್ಲಿಯೂ ಸಹ ಗೆಲುವು ಸಾಧಿಸಿ ಐಪಿಎಲ್ ಕಪ್ ನ್ನು ಗೆಲ್ಲಲಿ ಎಂದು ನಾವೆಲ್ಲರೂ ಆರ್.ಸಿ.ಬಿ. ತಂಡಕ್ಕೆ ಹಾರೈಸೋಣ.