ಬೆಳ್ತಂಗಡಿ:ರಾಜ್ಯದ ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಗಮನಹರಿಸುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದರು.
ತಾಲೂಕಿನ ಕುತ್ಲೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮತ್ತು ಸನಿಹದ ಮಂಜುಶ್ರೀ ಸಭಾಭನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ಓದಿದವರೇ ಆಗಿದ್ದಾರೆ.ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸ್ಥಳೀಯರ ಸಹಭಾಗಿತ್ವದ ಅಗತ್ಯವಿದೆ.ಹೀಗಾಗಿ ಸರಕಾರಿ ಶಾಲೆಗಳನ್ನು ಕಡೆಗೆಣಿಸಬಾರದು ಎಂದರು.
ಮನುಷ್ಯರ ನಡುವಿನ ಪ್ರೀತಿ, ಸಾಮರಸ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಕರ ಜವಾಬ್ದಾರಿಯುತ ನಡವಳಿಕೆಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳು ತಂದೆ, ತಾಯಿ, ಗುರುಗಳಿಗೆ ಗೌರವ ಕೊಡುವಂತಾಗಬೇಕು ಟೀಕೆಗಳು ಬರುತ್ತವೆ. ಸಾಯುತ್ತವೆ. ನಾವು ದೊಡ್ಡವ್ಯಕ್ತಿಗಳಾಗುವುದಕ್ಕಿಂತ ಸಮಾಜಕ್ಕೆ ನಾವು ಏನು ನೀಡಿದ್ದೇವೆ ಎಂಬುದು ಮುಖ್ಯವಾಗುತ್ತದೆಎಂದು ಆಶಿಸಿದರು.
ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಡಿ.ಆರ್.ಡಿ.ಪಿ.ಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಎಂ.ಆರ್.ಪಿ.ಎಲ್.ನ ಸಿ.ಎಸ್.ಆರ್. ಪ್ರಬಂಧಕ ಹರೀಶ್, ಕ್ವಾಯರ್ ಬೋರ್ಡ್ ಅಧ್ಯಕ್ಷ ನಟರಾಜ್, ಸೇವಾ ಭಾರತಿ ಅಧ್ಯಕ್ಷ ವಿನಾಯಕ್ ರಾವ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ,ಸದಸ್ಯ ರಾಜೇಶ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ನಾರಾವಿ ಗ್ರಾ.ಪಂ.ಅಧ್ಯಕ್ಷ ರಾಜರತ್ನ ಜೈನ್, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಉಮಾಕಾಂತ ಅರಿಗ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಮಿತ್ ಜೈನ್, ಹಿರಿಯರಾದ ಡಾಕಯ್ಯ ಪೂಜಾರಿ, ಗುತ್ತಿಗೆದಾರ ವಿನಯಕುಮಾರ್, ಉಪಾಧ್ಯಕ್ಷೆ ಶ್ವೇತಾ ಇದ್ದರು. ಕಾಮಗಾರಿಗಳನ್ನು ನಿರ್ವಹಿದವನ್ನು ಸಮ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ರೂಪಾ ವಂದಿಸಿದರು. ಶಿಕ್ಷಕ ಅಜಿತ್‌ಕುಮಾರ್ ನಿರ್ವಹಿಸಿದರು. *ಸರಕಾರಿ ಶಾಲೆಯಲ್ಲಿ ಕಲಿತ ಪಾಠ,ಪ್ರೀತಿ, ಶಿಸ್ತು ಇಂದು ನನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ. ಹೀಗಾಗಿ ನನಗೆ ಸರಕಾರಿ ಶಾಲೆಯೆಂದರೆ ವಿಶೇಷ ಅಭಿಮಾನ. ಕುತ್ಲೂರು ಶಾಲೆಗೆ ಕೆಲ ದಿನಗಳಲ್ಲಿ ಮಿನಿ ಬಸ್ ನೀಡಲಿದ್ದೇನೆ ಹಾಗೂ ಇಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಸರಕಾರದ ಮಟ್ಟದಲ್ಲಿ ಅನುಮತಿ ಕೊಡಿಸುತ್ತೇನೆ. ಒಟ್ಟಿನಲ್ಲಿ ಶಾಲೆ ರಾಜ್ಯಕ್ಕೇ ಮಾದರಿ ಯಾಗಬೇಕು ಎಂದು ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.
*ಇದೇ ಸಂದರ್ಭದಲ್ಲಿ ಅವರು ಶಾಲಾ ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಶಾಲಾ ಫಲಕ, ಕೊಳವೆ ಬಾವಿ, ಚಿತ್ರಗಳುಳ್ಳ ಶಾಲಾ ಕೊಠಡಿ, ವಿದ್ಯುದೀಕರಣ, ಶೌಚಾಲಯ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ ಕಂಪ್ಯೂಟರ್ ನ್ನು ಕೆ.ವಿ.ಪ್ರಭಾಕರ ಅವರು ಉದ್ಘಾಟಿಸಿದರು. ಶಾಲಾ ಆವರಣದಲ್ಲಿ ಗಿಡ ನೆಟ್ಟು ಶಾಲೆಯ ತರಕಾರಿ, ಅಡಕೆ ತೋಟವನ್ನು ವೀಕ್ಷಿಸಿದರು.
ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ -ಕೆ.ವಿ.ಪ್ರಭಾಕರ್
RELATED ARTICLES