ವರ್ಷದ 10 ತಿಂಗಳು ವಿದೇಶಿ ಪ್ರವಾಸದಲ್ಲಿ ಮೋಜು ಮಸ್ತಿ ಮಾಡುವ ರಾಹುಲ್ಗಾಂಧಿ ತಮಿಳುನಾಡಿನಲ್ಲಿ ತನ್ನ ಅಪ್ಪನನ್ನು ಕೊಂದ ಎಲ್ಟಿಟಿ ಪರ ಸಹಾನುಭೂತಿ ಹೊಂದಿದವರ ಜೊತೆ ಕೈಜೋಡಿಸಿದ್ದಾರೆ. ಇದರಿಂದ ಅವರ ಮನಸ್ಥಿತಿಗೊತ್ತಾಗುತ್ತದೆ. ಪ್ರಧಾನಿ ಸ್ಥಾನದ ಹಿರಿಮೆ ಮರೆತು ಅವರ ನಿವಾಸ ಮುಂದೆ ಧರಣಿ ನಡೆಸುವುದು ಖಂಡನೀಯ. ಪ್ರಧಾನಿ ಮೋದಿಗಾಗಿ ಜೀವಕೊಡಲು ನಾವು ಸಿದ್ಧರಿದ್ದೇವೆ ಎಂದು ಶಾಸಕ ಯಶ್ಪಾಲ್ ಸುವರ್ಣ ಘೋಷಿಸಿದ್ದಾರೆ.

ನಗರದ ಜಟ್ಕಾ ಸ್ಟ್ಯಾಂಡ್ನಲ್ಲಿ ಮಂಗಳವಾರ ಕಾಂಗ್ರೆಸ್ ಹಾಗೂ ದೇಶವಿರೋಧಿ ಶಕ್ತಿಗಳ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಕಾಶ್ರಾಜ್ ಕರಾವಳಿಯಲ್ಲಿ ಕಲಾವಿದರ ಮನಸ್ಸಿನಲ್ಲಿ ವಿಷಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಅಧಿಕಪ್ರಸಂಗತನ ಮಾಡಿದರೆ ಅರಬ್ಬಿ ಸಮುದ್ರಕ್ಕೆ ಬೀಳಬೇಕಾಗುತ್ತದೆ. ಮಣಿಪಾಲದಲ್ಲಿ ನಡೆದ ಕೊಕ್ರೋಚ್ಗಳ ಪ್ರತಿಭಟನೆಯಲ್ಲಿ 7 ಜನ ತಮಿಳುನಾಡು ಮೂಲದ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಬಡಕಾಯಿಸಿದ್ದಾರೆ. ಮಾಹೆ ಸಂಸ್ಥೆ ಮುಖ್ಯಸ್ಥರು ಇವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಅಕ್ರಮ ಮದರಸಾ, ಮತಾಂತರ ಕೇಂದ್ರಗಳಿಗೆ ಅನುಮತಿ ಕೊಟ್ಟರೆ ಮನೆಗೆ ನುಗ್ಗುತ್ತೇವೆ ಎಂದು ಎಚ್ಚರಿಸಿದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎ. ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್ ಅಲೆವೂರು, ದಿನಕರ್ ಬಾಬು, ಸುರೇಶ್ ನಾಯಕ್ ಕುಯಿಲಾಡಿ, ಲಾಲಾಜಿ ಆರ್. ಮೆಂಡನ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ಯಾಮಲ್ ಎಸ್. ಕುಂದರ್ ಉಪಸ್ಥಿತರಿದ್ದರು.

