ಹೈಕೋರ್ಟ್‌ನಲ್ಲಿ ಗ್ರೂಪ್-ಡಿ ಹುದ್ದೆಗಳ ನೇಮಕಾತಿ : 101 ಖಾಲಿ ಹುದ್ದೆಗಳು

0
89

ಬೆಂಗಳೂರು : ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿವಿಧ ಗ್ರೂಪ್-ಡಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 101 ಹುದ್ದೆಗಳು ಲಭ್ಯವಿದ್ದು, 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಪ್ರಮುಖ ವಿವರಗಳು:

ಒಟ್ಟು ಹುದ್ದೆಗಳು: 101

ಹುದ್ದೆಗಳ ಹೆಸರುಗಳು: ಜವಾನ, ಕಾವಲುಗಾರ, ಸ್ವೀಪರ್, ಜವಾನ (ಹೌಸ್ ಕೀಪಿಂಗ್), ಲಿಫ್ಟ್ ಅಟೆಂಡರ್, ಸಹಾಯಕ ಬೈಂಡರ್, ದರ್ಜಿ, ಧೋಬಿ

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಅರ್ಜಿ ಕೊನೆಯ ದಿನಾಂಕ: 21 ಮೇ 2026

ವಿದ್ಯಾರ್ಹತೆ:

ಜವಾನ, ಕಾವಲುಗಾರ, ಸ್ವೀಪರ್, ಹೌಸ್ ಕೀಪಿಂಗ್: 10ನೇ ತರಗತಿ ಪಾಸು

ಲಿಫ್ಟ್ ಅಟೆಂಡರ್: 10ನೇ ಪಾಸು + ಲಿಫ್ಟ್ ಮೆಕ್ಯಾನಿಸಂ ಅನುಭವ

ಸಹಾಯಕ ಬೈಂಡರ್: 10ನೇ ಪಾಸು + 2 ವರ್ಷ ಬೈಂಡಿಂಗ್ ಅನುಭವ

ದರ್ಜಿ: 10ನೇ ಪಾಸು + 3 ವರ್ಷ ದರ್ಜಿಯ ಅನುಭವ

ಧೋಬಿ: 10ನೇ ಪಾಸು + ಸಂಬಂಧಿತ ಅನುಭವ

ವಯೋಮಿತಿ:

ಕನಿಷ್ಠ: 18 ವರ್ಷ

ಗರಿಷ್ಠ:

ಸಾಮಾನ್ಯ ವರ್ಗ: 40 ವರ್ಷ

ಹಿಂದುಳಿದ ವರ್ಗ: 43 ವರ್ಷ

ಪರಿಶಿಷ್ಟ ಜಾತಿ/ಪಂಗಡ: 45 ವರ್ಷ

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಎಸ್‌ಬಿಐ ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ : ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದ್ದು, ಅರ್ಹರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ.

https://judiciary.karnataka.gov.in ಮೂಲಕ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದೆಂದು ಅಧಿಸೂಚಿಸಲಾಗಿದೆ.

LEAVE A REPLY

Please enter your comment!
Please enter your name here