ಮಿಜಾರು ಕೆ.ಪಿ.ಎಸ್ ನಲ್ಲಿ ಕೆಂಪು ದಿನಾಚರಣೆ

0
38

ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿ ಜಾರು ಪ್ರಾಥಮಿಕ ಶಾಲಾ ವಿಭಾಗದ ಎಲ್ಕೆಜಿ ಯುಕೆಜಿ ತರಗತಿಯ ವಿದ್ಯಾರ್ಥಿಗಳಿಗೆ ಬಣ್ಣದ ಅರಿವು ಮೂಡಿಸುವ ಸಲುವಾಗಿ RED -DAY ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯನಿ ನಾಗರತ್ನ ಶಿರೂರು ಉದ್ಘಾಟಿಸಿದರು. ಗೀತಾ ಸ್ವಾಗತಿಸಿದರು. ಪ್ರೇಮ ಧನ್ಯವಾದ ಸಲ್ಲಿಸಿದರು. ಪವಿತ್ರ ಮತ್ತು ರೇಖಾ ರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಚೈತ್ರ, ಹೇಮಾವತಿ, ಮತ್ತು ಸಹಾಯಕಿಯರಾದ ಮಮತಾ ಪವಿತ್ರ ಮತ್ತು ಎಲ್ಲಾ ಶಿಕ್ಷಕ ಬಂಧುಗಳು ಸಹಕರಿಸಿದರು.

ಆ ದಿನ ಎಲ್ಲಾ ಮಕ್ಕಳು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದರು . ಕೆಂಪು ಬಣ್ಣದ ತಿಂಡಿ ತಿನಿಸುಗಳು, ತಂಪು ಪಾನೀಯಗಳು, ಹಣ್ಣುಗಳು ಹೂಗಳು, ತರಕಾರಿಗಳು,ವಿವಿಧ ವಸ್ತುಗಳನ್ನು ಪ್ರದರ್ಶನ ಮಾಡಿ ಮಕ್ಕಳಿಗೆ ಅದರ ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here