ಬೆಳ್ತಂಗಡಿ: ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2025-26 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.
ಸದರಿ ಯೋಜನೆಯಡಿ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರು ನೋಂದಾವಣೆಗೊಳ್ಳಬಹುದಾಗಿದ್ದು, ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್ ನಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಸದರಿ ಯೋಜನೆಯಡಿ ನೋಂದಾವಣೆಗೊಳ್ಳಬಹುದಾಗಿರುತ್ತದೆ ಹಾಗೂ ಸಾಮಾನ್ಯ ಸೇವಾ ಕೇಂದ್ರ (CSC) ಮತ್ತು ಗ್ರಾಮ ಒನ್ ಗಳ ಮೂಲಕವೂ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಕ್ರಮವಾಗಿ ರೂ.6400/- ಹಾಗೂ ರೂ.2350/- ಗಳಾಗಿರುತ್ತದೆ. ಈ ಯೋಜನೆಯಡಿ ನೋಂದಾವಣೆಗೊಳ್ಳಲು 31.07.2025 ಅಂತಿಮ ದಿನಾಂಕವಾಗಿದ್ದು, ತುರ್ತಾಗಿ ರೈತರು ಸದರಿ ಯೋಜನೆಯಡಿ ನೋಂದಾವಣೆಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ TATA AIG ಸಂಸ್ಥೆಯು ಆಯ್ಕೆಯಾಗಿದ್ದು, ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ TATA AIG ಸಂಸ್ಥೆಯ ಪ್ರತಿನಿಧಿ ಶುಭಂ, – 9131962255 ಅಥವಾ ತೋಟಗಾರಿಕೆ ಇಲಾಖಾಧಿಕಾರಿಗಳಾದ ಮಹಾವೀರ ಶೇಬಣ್ಣವರ ನೇ., ಸಹಾಯಕ ತೋಟಗಾರಿಕೆ ಅಧಿಕಾರಿ, ಬೆಳ್ತಂಗಡಿ ರೈ.ಸಂ.ಕೇಂದ್ರ – 8123921087, ಭೀಮರಾಯ ಸೊಡ್ಡಗಿ, ಸಹಾಯಕ ತೋಟಗಾರಿಕೆ ಅಧಿಕಾರಿ, ವೇಣೂರು ರೈ.ಸಂ.ಕೇಂದ್ರ, – 9741713598, ಮಲ್ಲಿನಾಥ ಬಿರಾದಾರ, ಸಹಾಯಕ ತೋಟಗಾರಿಕೆ ಅಧಿಕಾರಿ, ಕೊಕ್ಕಡ ರೈ.ಸಂ.ಕೇಂದ್ರ – 9986411477, ಚಂದ್ರಶೇಖರ ಕೆ.ಎಸ್., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ – 9448336863 ಇವರನ್ನು ಸಂಪರ್ಕಿಸಬಹುದಾಗಿದೆ.