ಅಲಂಗಾರು ವೃತ್ತದ ಬೆನ್ನು ಮೂಳೆ ಮುರಿದ ದಯನೀಯ ಪರಿಸ್ಥಿತಿ

0
37

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಮಂಗಳೂರು ಹೊಸಪೇಟೆ ನಡುವೆ ಬರುವ ಮೂಡುಬಿದಿರೆ ಕಾರ್ಕಳ ರಸ್ತೆ ಇದೀಗ ಡಿಬಿಎಲ್ ಕಂಪೆನಿಯವರಿಂದ ಚತುಷ್ಪಥ, ಷಟ್ಪಥವಾಗಿ ಬದಲಾಗುತ್ತಿದೆ. ಯಾವುದು ಏನೇ ಬದಲಾಗುತ್ತಿದ್ದರೂ ಕೆಲವಾರು ಕಡೆಗಳಲ್ಲಿ ಸ್ಥಳೀಯ ವ್ಯಕ್ತಿಗಳಿಗೆ ಸಮರ್ಪಕ ಪರಿಹಾರ ಒದಗಿಸಿಲ್ಲ. ಕೆಲವಾರು ಕಡೆಗಳಲ್ಲಿ ಸರಕಾರಿ ಜಾಗ ಅತಿಕ್ರಮಿಸಿ ಹಾಕಿದ ಬೇಲಿಯನ್ನು ತೆಗೆಯದೇ ಖಾಸಗಿ ವ್ಯಕ್ತಿಗಳಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ.


ರಾಷ್ಟ್ರೀಯ ಹೆದ್ದಾರಿಯ ಮೂಲ ರೂಪವನ್ನು ತಮಗೆ ಬೇಕಾದಂತೆ ತಿರುಚಿ ಪರ್ಸಂಟೇಜ್ ನೀಡಿದವರಿಗೆ ಭರಪೂರ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಫೋಟೋ,ದಾಖಲೆಗಳು ಬಿಡುಗಡೆಯಾಗಿದೆ.
ಅದೇನೇ ಇರಲಿ ಇದೀಗ ಮುಖ್ಯ ವಿಷಯಕ್ಕೆ ಬರುವುದಾದರೆ ಅರೆಬರೆ ರಾಷ್ಟ್ರೀಯ ಹೆದ್ದಾರಿ ಆದ ಕಾರಣ ಹಲವಾರು 10-14-18-22 ಚಕ್ರದ ಲಾರಿಗಳ ಭರಾಟೆ ಜೋರಾಗಿದೆ. ಅಂತಹ ಬಹು ಚಕ್ರದ ಲಾರಿಗಳ ತಿರುಗುವಿಕೆ ಸಾಧ್ಯವಾಗದೇ ಅಲಂಗಾರು ಸರ್ಕಲ್ ತನ್ನ ಮೂಳೆ ಮುರಿದುಕೊಂಡು ಬಿದ್ದಿದೆ.
ಮುರಿದ ವೃತ್ತವನ್ನು ಸರಿಪಡಿಸಲು ಪುರಸಭೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ನಡುವೆ ಹೊಯ್ದಾಟ, ಗುದ್ದಾಟ ಇರಬಹುದು.

ಫೋಟೋ ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here