ಬೇರೆ ಬೇರೆ ಧರ್ಮವೆಂದು ಮದುವೆಗೆ ನಿರಾಕರಣೆ, ಪ್ರೇಯಸಿಯ ದುಪಟ್ಟಾದಲ್ಲೇ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

0
381

ಉತ್ತರ ಪ್ರದೇಶ, ಬೇರೆ ಬೇರೆ ಧರ್ಮದವರೆಂದು ಇಬ್ಬರ ಮದು ಮದುಗೆ ಎರಡೂ ಕುಟುಂಬಗಳು ನಿರಾಕರಿಸಿದ್ದಕ್ಕೆ ಯುವಕ ಪ್ರೇಯಸಿಯ ದುಪಟ್ಟಾದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕುರ್ದಿಖೇಡ ಗ್ರಾಮದ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಸಮ್ರೇಜ್ ಎಂದು ಗುರುತಿಸಲಾಗಿದೆ. ಈತ ಹಮೀದ್ ಅಲಿಯಾಸ್ ಭೂರಾ ಎಂಬವರ ಪುತ್ರನಾಗಿದ್ದು, ಈತ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಸ್ಥಳೀಯ ನಿವಾಸಿಯಾಗಿದ್ದಾನೆ. ಸಮ್ರೇಜ್ ಮೃತದೇಹ ಮರದಲ್ಲಿ ನೇತಾಡುತ್ತಿತ್ತು.

ಈ ಘಟನೆ ಸುತ್ತ ವಿಡಿಯೋವೊಂದು ಹರಿದಾಡಿದ್ದು, ಯುವತಿ ಆತನನ್ನು ತಬ್ಬಿ ಅಳುತ್ತಿರುವುದನ್ನು ಕಾಣಬಹುದು. ದಲಿತ ಸಮುದಾಯದ ಹುಡುಗಿಯೊಂದಿಗೆ ಸಮ್ರೇಜ್ ದೀರ್ಘಕಾಲದ ಸಂಬಂಧದಲ್ಲಿದ್ದ. ಅವರ ಅಂತರ್ಧರ್ಮೀಯ ಸಂಬಂಧವನ್ನು ಎರಡೂ ಕುಟುಂಬಗಳು ನಿರಾಕರಿಸಿದ್ದವು. ಹುಡುಗಿ ಇತ್ತೀಚೆಗೆ ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ವಿಷಯ ಉಲ್ಬಣಗೊಂಡಿತ್ತು.

ಆಕೆಯಿಂದ ದೂರ ಹೋಗಿರುವುದು ಮತ್ತು ಕುಟುಂಬದ ಒತ್ತಡದಿಂದ ಮನನೊಂದ ಸಮ್ರೇಜ್ ತಡರಾತ್ರಿ ಆಕೆಗೆ ಮನೆಯಿಂದ ಹೊರಬರಲು ಹೇಳಿದ್ದ, ಇಬ್ಬರೂ ಕಾಡಿನ ದಾರಿ ಹಿಡಿದರು. ಇಬ್ಬರೂ ಮಾತನಾಡುತ್ತಿರುವಾಗ ವಾಗ್ವಾದ ತೀವ್ರವಾಗಿ ಕೋಪದಲ್ಲಿ ಆತ ಪ್ರೇಯಸಿಯ ದುಪಟ್ಟಾವನ್ನು ಎಳೆದುಕೊಂಡು ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವವನ್ನು ನೋಡಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮ್ರೇಜ್ ಅವರ ಮೊಬೈಲ್ ಫೋನ್ ಮತ್ತು ಮೋಟಾರ್ ಸೈಕಲ್ ಅನ್ನು ಸ್ಥಳದಿಂದ ವಶಪಡಿಸಿಕೊಂಡರು. ತನಿಖೆಯ ಭಾಗವಾಗಿ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here