ರೇಖಾ ಶಿವರಾಮ ಭಟ್ ರವರಿಗೆ ಬೆಸ್ಟ್ ಅವಾರ್ಡ್ ” ಗ್ಲೋಬಲ್ ಕನ್ನಡತಿ ” ಪ್ರಶಸ್ತಿಗೆ ಆಯ್ಕೆ

0
175

ಯಲ್ಲಾಪುರ: ಯಲ್ಲಾಪುರ ತಾಲೂಕಿನ ನೆಲೆಪಾಲ (ಊರು) ಮಾವಿನಮನೆ ಗ್ರಾಮದ ಶ್ರೀಮತಿ ರೇಖಾ ಶಿವರಾಮ ಭಟ್ (ಹಲಗುಮನೆ) ಇವರು ಡಿ ed, ಎಂ ಎ ಪದವಿಯನ್ನು ಮುಗಿಸಿರುತ್ತಾರೆ. ಇವರು ಕಳೆದ ದಶಕಗಳಿಂದ ಕಲೆ ,ಸಾಹಿತ್ಯ, ಸಾಂಸ್ಕೃತಿಕ ಮತ್ತು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಅಖಿಲ ಕರ್ನಾಟಕ ಜ್ಞಾನ ದೀಪ ಸಾಹಿತ್ಯ ಪರಿಷತ್ ಉತ್ತರ ಕನ್ನಡ ಅಧ್ಯಕ್ಷರು, ಕರುನಾಡ ಹಣತೆ ಕವಿ ಬಳಗ (ರಿ) ಮಹಿಳಾ ರಾಜ್ಯಾಧ್ಯಕ್ಷರು, ಸಿರಿಗನ್ನಡ ಮಹಿಳಾ ವೇದಿಕೆಯ ಗೌರವಾಧ್ಯಕ್ಷರು, ಕ ಹ ಕ ಬ.ಕೇಂದ್ರ ಘಟಕದ ರಾಜ್ಯಾಧ್ಯಕ್ಷರು, ಭಜನಾ ಮಂಡಳಿಯ ಸದಸ್ಯರು, ಕರುನಾಡ ಹಣತೆ ಕವಿ ಬಳಗ (ರಿ) ಉತ್ತರ ಕನ್ನಡ ಪ್ರಧಾನ ಕಾರ್ಯದರ್ಶಿಯಗಳಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ. ಹಾಗೆಯೇ ಸಮೃದ್ಧಿ ಕರ್ನಾಟಕ ಚಾನೆಲ್ ಸಾಹಿತ್ಯ ಸಂಪತ್ತು ವೇದಿಕೆಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರಿಗೆ “ಕರುನಾಡ ಕೇಸರಿ ರಾಷ್ಟ್ರೀಯ” ಪ್ರಶಸ್ತಿ ರಾಷ್ಟ್ರಮಟ್ಟದ “ಸಾಹಿತ್ಯ ಸಿರಿ” ಪ್ರಶಸ್ತಿ ರಾಜ್ಯಮಟ್ಟದ “ಕನ್ನಡ ವಿಭೂಷಣ” ಪ್ರಶಸ್ತಿ ರಾಜ್ಯಮಟ್ಟದ “ಹೆಮ್ಮೆಯ ಕನ್ನಡತಿ” ಪ್ರಶಸ್ತಿ ರಾಜ್ಯ “ಕಾವ್ಯಶ್ರೀ” ಪ್ರಶಸ್ತಿಗಳು ಸಂದಿವೆ ಹಾಗೆ “ಯುವ ಜನತೆಯ ಸ್ಪೂರ್ತಿದಾಯಕ ಮಹಿಳೆ” ಎಂಬ ಹೆಗ್ಗಳಿಕೆಯನ್ನು ಸಹ ಪಡೆದಿರುವರು “ಭಕ್ತಿ ಮಂದಾರ”ವೆಂಬ ಭಕ್ತಿಗೀತೆಯ ಕೃತಿಯನ್ನು ರಚಿಸಿರುತ್ತಾರೆ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಿನಾಂಕ 18-5- 2025 ಭಾನುವಾರದಂದು ಗಾಂಧಿ ಭವನ ಬೆಂಗಳೂರಲ್ಲಿ ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ಬೆಸ್ಟ್ ಅವಾರ್ಡ್ “ಗ್ಲೋಬಲ್ ಕನ್ನಡತಿ” ಪ್ರಶಸ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ಚಂದ್ರಶೇಖರ್ ಮಾಡಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here