ಹದಿನೆಂಟು ಮಾಗಣೆಯ ಒಡತಿ ಜಗನ್ಮಾತೆ ಶ್ರೀ ಐಲ ದುರ್ಗಾಪರಮೇಶ್ವರಿ ತಾಯಿಯ *ಐಲಾಂಬಿಕೆ* ತುಳು ಭಕ್ತಿಗೀತೆ ಬಿಡುಗಡೆ

0
13

ಮಂಗಲ್ಪಾಡಿ : ಯುವ ಪ್ರತಿಭೆ ಕುಮಾರಿ ಸಾಕ್ಷಿ ಶೆಟ್ಟಿ ಮಂಗಲ್ಪಾಡಿ ಅವರು ಹದಿನೆಂಟು ಮಾಗಣೆಯ ಒಡತಿ, ಜಗನ್ಮಾತೆ ಶ್ರೀ ಐಲ ದುರ್ಗಾಪರಮೇಶ್ವರಿ ತಾಯಿಯ ಕುರಿತಾದ ಸುಂದರ ತುಳು ಭಕ್ತಿಗೀತೆಯನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

ತುಳುನಾಡಿನ ಆರಾಧನಾ ಪರಂಪರೆ, ದೈವ-ದೇವರುಗಳ ಮೇಲಿನ ಭಕ್ತಿ ಹಾಗೂ ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಒಳಗೊಂಡಿರುವ ಈ ಭಕ್ತಿಗೀತೆ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಬಾಲ್ಯದಿಂದಲೇ ಸಂಗೀತ ಹಾಗೂ ಕಲಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಸಾಕ್ಷಿ ಶೆಟ್ಟಿ ಅವರು ತಮ್ಮ ಪ್ರತಿಭೆಯ ಮೂಲಕ ತುಳು ಭಕ್ತಿಗೀತೆ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.

ಶ್ರೀ ಐಲ ದುರ್ಗಾಪರಮೇಶ್ವರಿ ತಾಯಿಯ ಕೃಪಾಶೀರ್ವಾದದೊಂದಿಗೆ ಮೂಡಿಬಂದಿರುವ ಈ ಭಕ್ತಿಗೀತೆ ಯುವ ಪ್ರತಿಭೆಯ ಕಲಾ ಪಯಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ.

ಈ ಹೊಸ ಪ್ರತಿಭೆಗೆ ಎಲ್ಲರ ದಿವ್ಯಾಶೀರ್ವಾದ, ಪ್ರೋತ್ಸಾಹ ಹಾಗೂ ಬೆಂಬಲ ಅಗತ್ಯವಾಗಿದ್ದು, ಭಕ್ತಿಗೀತೆಯನ್ನು ಎಲ್ಲರೂ ವೀಕ್ಷಿಸಿ Like, Share ಹಾಗೂ Subscribe ಮಾಡುವ ಮೂಲಕ ಸಾಕ್ಷಿ ಶೆಟ್ಟಿ ಅವರ ಪ್ರತಿಭೆಯನ್ನು ಹರಸಿ ಹಾರೈಸುವಂತೆ ವಿನಮ್ರವಾಗಿ ಮನವಿ ಮಾಡಲಾಗಿದೆ.