ಜೈ ತುಳುನಾಡು ಉಡುಪಿ ಘಟಕದ ವತಿಯಿಂದ ತುಳು ಕ್ಯಾಲೆಂಡರ್ ಕಾಲಕೋಂದೆ ಬಿಡುಗಡೆ

0
332

ಉಡುಪಿ : ಜೈ ತುಳುನಾಡು ಉಡುಪಿ ಘಟಕದ ವತಿಯಿಂದ ತುಳು ಕಾಲಮಾನದ ಪ್ರಕಾರ ತಯಾರಿಸಿರುವ ಕ್ಯಾಲೆಂಡರ್ (ಕಾಲಕೋಂದೆ) ಸೋಮವಾರ ಉಡುಪಿ ಪತ್ರಿಕಾಭವನದಲ್ಲಿ ಅನಾವರಣಗೊಳಿಸಲಾಯಿತು. ಬಳಿಕ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಆಕಾಶ್‌ರಾಜ್ ಜೈನ್ ತುಳು ಕ್ಯಾಲೆಂಡರ್ ಎಪ್ರಿಲ್ ತಿಂಗಳ ಮಧ್ಯದಲ್ಲಿ ಆರಂಭವಾಗುತ್ತದೆ. ಸಂಕ್ರಾಂತಿಯ ಮರುದಿನ ತಿಂಗಳಿನ ಆರಂಭದ ದಿನವಾಗಿದ್ದು, ಮೊದಲ ದಿನವನ್ನು ಸಿಂಗೊಡೆ ಎಂದು ಕರೆಯಲಾಗುತ್ತದೆ. ಪಗ್ಗು ಬೇಶ, ಕಾರ್ತೆಲ್, ಆಟಿ, ಸೋಣ, ನಿರ್ನಾಲ್ (ಕನ್ಯಾ), ಬೊಂತೆಲ್, ಜಾರ್ದೆ, ಪೆರಾರ್ದೆ, ಪುಯಿಂತೆಲ್(ಪೊನ್ನಿ), ಮಾಯಿ, ಸುಗ್ಗಿ ಇವು ತುಳು ತಿಂಗಳುಗಳಾಗಿದೆ ಎಂದರು. ಯುವಪೀಳಿಗೆಗೆ ಹಾಗೂ ತೌಳವ ಸಮಾಜಕ್ಕೆ ತಮ್ಮ ಸಂಸಾರದ ಅರಿವು ಹಾಗು ತುಳು ತಿಂಗಳಿನ ಮೂಲಕ ತಮ್ಮ ಸೆಂಸ್ಕೃತಿಯ ಒಲವನ್ನು ಬೆಳೆಸಲು ಕ್ಯಾಲೆಂಡರ್ ಪೂರಕವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತುಳುನಾಡು ಘಟಕದ ಸುಶೀಲಾ ಜಯಕರ್, ಪ್ರಶಾಂತ್ ಕುಂಜೂರು, ಶರತ್‌ ಕುಮಾರ್ ಕೊಡವೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here