Saturday, April 19, 2025
Homeಉಡುಪಿಕುವಿಕು ಅವರ 10ನೇ ತುಲು ಕೃತಿ 'ಪತ್ತ್' ತುಲು ಕಬಿತೆಲೆ ತಂಚಿ ಕವನ ಸಂಕಲನ ಬಿಡುಗಡೆ

ಕುವಿಕು ಅವರ 10ನೇ ತುಲು ಕೃತಿ ‘ಪತ್ತ್’ ತುಲು ಕಬಿತೆಲೆ ತಂಚಿ ಕವನ ಸಂಕಲನ ಬಿಡುಗಡೆ

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾ ಮಂಟಪದಲ್ಲಿ 13-04-2025 ರಂದು ತುಳುನಾಡ್ ಕನ್ಕ್ಲೇವ್ -2025 ತುಲುವ ಜವನೆರೆ ಆಯನೊ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರ ಹತ್ತನೇಯ ತುಲು ಕೃತಿ ‘ಪತ್ತ್’ ತುಲು ಕಬಿತೆಲೆ ತಂಚಿ ಎಂಬ ಕವನ ಸಂಕಲನವು , ಅಖಿಲ ಭಾರತ ಆಕಾಶವಾಣಿ ಮಂಗಳೂರು ಕೇಂದ್ರದಲ್ಲಿ ಹಿರಿಯ ಶ್ರೇಣಿ ಪ್ರಸಾರಕರಾಗಿ ಸೇವೆ ಸಲ್ಲಿಸಿದ, ಸಾಹಿತ್ಯ ,ಸಂಗೀತ,ರಂಗಭೂಮಿ , ಪತ್ರಿಕೋದ್ಯಮ ಹೀಗೆ ಹಲವು ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಶ್ರೀಯುತ ಮುದ್ದು ಮೂಡುಬೆಳ್ಳೆ ಯವರಿಂದ ಬಿಡುಗಡೆಯಾಯಿತು.


ಒಬ್ಬ ಗೃಹಿಣಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕುಶಲಾಕ್ಷಿ ಕಣ್ವತೀರ್ಥರವರ ಸಾಧನೆ ಮೆಚ್ಚುವಂತದ್ದು,ತುಲು ಸಾಹಿತ್ಯ ದ ಹತ್ತು ಕೃತಿಗಳನ್ನು ಪ್ರಕಟಿಸುವುದೆಂದರೆ ಸಾಮಾನ್ಯವೇನಲ್ಲ,ಇವರ ಕವನಗಳಲ್ಲಿ ಪರಿಸರ ಕಾಳಜಿ,ಸಮಾಜಕ್ಕೆ ಸಂದೇಶಗಳು ತುಂಬಿಕೊಂಡಿದ್ದು ಕೆಲವು ಕವನಗಳು ರಾಗವಾಗಿ ಹಾಡಲು ಬರುವಂತಿದೆ.ಕಿರಿಯ ಬರಹಗಾರರನ್ನು ತಿದ್ದಿ ತೀಡಿ ಮುನ್ನಡೆಸುವ ಅವರ ಕೆಲಸ ಶ್ಲಾಘನೀಯ,ಮಕ್ಕಳ ತುಲು ಸಾಹಿತ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಮುಂದಿನ ಜನಾಂಗಕ್ಕೆ ಮಾತೃ ಭಾಷೆಯ ಜ್ಞಾನವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ,ಅವರಿಂದ ತುಲು ಭಾಷೆಯಲ್ಲಿ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಕೃತಿ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೈ ತುಲು ನಾಡ್(ರಿ.) ಕೇಂದ್ರ ಘಟಕದ ಸಂಘಟನಾ ಕಾರ್ಯದರ್ಶಿ ಯಾದ ಸಂತೋಷ್. ಎನ್. ಎಸ್ ಕಟಪಾಡಿ, ಉಡುಪಿ ಘಟಕದ ಜೊತೆ ಕಾರ್ಯದರ್ಶಿಯಾದ ಸುಪ್ರೀತಾ,ವಿಶಾಂತ್ ಉದ್ಯಾವರ,ಜೊತೆ ಕೋಶಾಧಿಕಾರಿಯಾದ ಸ್ವಾತಿ ಸುವರ್ಣ,ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಂಬಿಕಾ ಕನ್ನರ್ಪಾಡಿ, ಸದಸ್ಯರಾದ ವರುಣ್, ದೀಪಕ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular