ಬಂಟ್ವಾಳ : ಧಾರ್ಮಿಕ ಕೇಂದ್ರಗಳು ಸರಕಾರಿ ಶಾಲೆಗಳಿಗೆ ಪೂರಕವಾಗಿರಬೇಕು. ಊರಿನ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೆ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸುವುದಕ್ಕೆ ಹಿಂದೇಟು ಹಾಕುತ್ತಾರೆ, ಆದುದರಿಂದ ಬಂಟ್ವಾಳ ತಾಲೂಕಿನ ಮೊಗರ್ನಾಡು ಸೀಮೆಯ ಸರಕಾರಿ ಶಾಲೆಗಳಿಗೆ ಕಲ್ಲಡ್ಕ ನೀಟಿಲೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾರುದ್ರ ಯಾಗದಲ್ಲಿ ಉಳಿಕೆಯ ಶೇಕಡ 50 ಭಾಗವನ್ನು ಊರಿನ ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗುವುದು ಎಂದು ಧಾರ್ಮಿಕ ಮುಖಂಡ ಚೌಟ ಗ್ಯಾಸ್ ಸಂಸ್ಥೆಯ ಮಾಲಕ ಜಗನ್ನಾಥ್ ಚೌಟ ಬದಿಗುಡ್ಡೆ ಹೇಳಿದರು.
ಅವರು ಬುಧವಾರ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ “ನನ್ನ ಶಾಲೆ ನನ್ನ ಕೊಡುಗೆ” ವಿಶೇಷ ಕಾರ್ಯಕ್ರಮದಲ್ಲಿಶಾಲಾ ವಿಜ್ಞಾಪನ ಪತ್ರವನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.
ಶಾಲಾ ಹಿರಿಯ ವಿದ್ಯಾರ್ಥಿ ಎ. ರುಕ್ಮಯ ಪೂಜಾರಿ ನೂತನ ಶಾಲಾ ಲಾಂಛನವನ್ನು ಬಿಡುಗಡೆಗೊಳಿಸಿದರು. ಹಾಗೂ ಮುಂದಿನ ಅಭಿವೃದ್ಧಿ ಚಟುವಟಿಕೆಗಳಿಗೆ ಸಹಕಾರ ಕೋರುವ ವೀಡಿಯೋವನ್ನು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ರೈ, ರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನನ್ನ ಶಾಲೆ ನನ್ನ ಕೊಡುಗೆಗೆ ಪೂರಕವಾಗಿ ದೇಣಿಗೆ ಕೋಪನ್ ಬಿಡುಗಡೆಗೊಳಿಸಲಾಯಿತು.
ಶಾಲಾ ಶತಮಾನೋತರ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷ ನಾಗೇಶ್ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತಿನ್ ಕುಮಾರ್ ಏಳ್ತಿಮಾರ್, ರತ್ನಾಕರ ಶೆಟ್ಟಿ ಕಲ್ಲಡ್ಕ, ಪಂಚಾಯತ್ ಸದಸ್ಯ ಲಿಖಿತ ಆರ್ ಶೆಟ್ಟಿ, ಯೂಸುಫ್ ಹೈದರ್ , ರಮೇಶ್ ನಾಯಕ್, ಶ್ರೀ ಸುಂದರ್ ರಾಕ್ ಲೆನ್, ಮೋಹನದಾಸ್ ಕೊಟ್ಟಾರಿ, ರವಳ ನಾಥ್ ಮೆಲ್ಕಾರ್, , ಮೊದಲಾದವರು ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಂದನ ಜೈನ ಪ್ರಾರ್ಥಿಸಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಧುಸೂದನ್ ಐತಾಳ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಪ್ರಾಸ್ತಾವಿಕ ಮಾಡಿ, ಹಮೀದ್ ಅಲಿ ವಿಜ್ಞಾಪನ ಪತ್ರ ವಾಚಿಸಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯೆ ಪುಷ್ಪಾವತಿ ವಂದಿಸಿ, ಶಿಕ್ಷಕಿ ಸೌಮ್ಯಲತಾ ರಾವ್ ಕಾರ್ಯಕ್ರಮ ನಿರೂಪಿಸಿದರು.