ಕುಂದಾಪುರ : ನಗರದ ಖಾರ್ವಿಕೇರಿ ನಿವಾಸಿ ಧಾರ್ಮಿಕ ಮುಖಂಡ ಜಯಾನಂದ ಖಾರ್ವಿಯವರು ಹೃದಯಾಘಾತದಿಂದ ಇಂದು ಮುಂಜಾನೆ 3.00 ಗಂಟೆಯ ವೇಳೆಗೆ ನಿಧನ ಹೊಂದಿದರು ಅವರಿಗೆ 70 ವರ್ಷ ವಯಸ್ಸಾಗಿತ್ತು.
ಗುತ್ತಿಗೆದರಾರದ ಅವರು ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಕೊಂಕಣ ಖಾರ್ವಿ ಸಮಾಜದ ಖಾರ್ವಿಕೇರಿಯ ಶ್ರೀ ಮಹಂಕಾಳಿ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಅವರ ನಿಧನಕ್ಕೆ ಕೊಂಕಣ ಖಾರ್ವಿ ಸಮಾಜ ಬಾಂಧವರು ಹಾಗೂ ವಿವಿಧ ಧಾರ್ಮಿಕ ಮುಖಂಡರು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.