
ಸಜೀಪ ಮೂಡ: ಈಶ್ವರಮಂಗಲದ ಶ್ರೀ ಸದಾಶಿವ ದೇವಸ್ಥಾನ ಕ್ಷೇತ್ರದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ವತಿಯಿಂದ ಡಿಸೆಂಬರ್ 26ರಂದು ಶನಿವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಂಗವಾಗಿ ಪಾಲಾಶ ಮೆರವಣಿಗೆ, ಸಾಮೂಹಿಕ ಶ್ರೀ ಶನೇಶ್ವರ ವ್ರತಕಥಾ ಪೂಜೆ, ಶ್ರೀ ಸದಾಶಿವ ದೇವರಿಗೆ ರಂಗಪೂಜೆ, ಶ್ರೀ ಅಯ್ಯಪ್ಪ ಸ್ವಾಮಿಗೆ ರಂಗಪಡಿ ಪೂಜೆ, ಅನ್ನದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ನಂದಾವರದ ದೇವಸ್ಥಾನ ಸಮಿತಿ ಸದಸ್ಯ ಬಿ. ದೇವಿ ಪ್ರಸಾದ್ ಪೂಂಜ, ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಪದ್ಮನಾಭ ಪೂಜಾರಿ, ಬಾಲಕೃಷ್ಣ ಕುಲಾಲ್, ರವಿ ಚಂದ್ರ ಪಂಬದ, ಸುಧಾಕರ, ಸತೀಶ, ದಿವಾಕರ, ಅಶೋಕ್ ಪೂಜಾರಿ, ಕೃಷ್ಣ ಕಾರಂತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
