ಕುಡಾಲುಮೇರ್ಕಳ ಕುಲಾಲ ಉಪ್ಯಣ್ಣ ಬರಿ ಮೂಲಸ್ಥಾನದಲ್ಲಿ ಜ. 22 ರಿಂದ ವಿವಿಧ ಕಾರ್ಯಕ್ರಮದ ಪೂರ್ವಭಾವಿ ಸಭೆ

0
23

ಮಂಜೇಶ್ವರ ತಾಲೂಕಿನ ಕುಡಾಲುಮೇರ್ಕಳದ ಕುಲಾಲ ಉಪ್ಯಣ್ಣ ಬರಿ ಮೂಲಸ್ಥಾನ ಚನ್ನಿಕುಡೇಲು ತರವಾಡಿನಲ್ಲಿ 2027ರ ಜನವರಿ 22 ರಿಂದ 26ರ ವರೆಗೆ ಜರಗಲಿರುವ ಸಾನ್ನಿಧ್ಯ ಕಲಶ,ಧರ್ಮದೈವ ಶ್ರೀಮಲರಾಯಿಗೆ ಬೆಳ್ಳಿಯ ಮೊಗ ಸಮರ್ಪಣೆ, ನೇಮೋತ್ಸವ ಮೊದಲಾದ ಕಾರ್ಯಕ್ರಮಗಳ ಪೂರ್ವಸಿದ್ಧತೆಗಾಗಿ ಕುಟುಂಬ ಸದಸ್ಯರ ವಿಶೇಷ ಮಹಾಸಭೆಯು ದಿನಾಂಕ 20-09-2026ನೇ ಆದಿತ್ಯವಾರ ಚನ್ನಿಕುಡೇಲು ತರವಾಡಿನಲ್ಲಿ ಜರುಗಿತು.

ಸಮಿತಿ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಎರುಗಲ್ಲು ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮಗಳ ರೂಪುರೇಖೆಯ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದರು..ಮೂಲಸ್ಥಾನ ಸಮಿತಿಯ ಕೋಶಾಧಿಕಾರಿ ಸುಂದರ ಕಟ್ನಡ್ಕ ಕಾರ್ಯ ಕ್ರಮದ ಖರ್ಚು ವೆಚ್ಚಗಳ ಮಾಹಿತಿ ಒದಗಿಸಿದರು. ಕಾರ್ಯದರ್ಶಿ ಕೃಷ್ಣ ಕಳತ್ತೂರು ಸ್ವಾಗತಿಸಿ, ಜತೆ ಕಾರ್ಯದರ್ಶಿ ತೇಜಕುಮಾರ್ ಕುಲಾಲ್ ಎನ್. ವಂದಿಸಿದರು.