ಅರಣ್ಯ ಇಲಾಖೆಗೆ ಹೆಬ್ರಿ ತಾಲೂಕು ರೆಡ್ ಕ್ರಾಸ್ ಸೊಸೈಟಿಯಿಂದ ಮನವಿ

0
7

ಹೆಬ್ರಿ : ಮುದ್ರಾಡಿ, ಹೆಬ್ರಿ, ಶಿವಪುರ ಹೆದ್ದಾರಿ ಪಕ್ಕದಲ್ಲಿ ಬೀಳುವ ಸ್ಥಿತಿಯಲ್ಲಿ ಇರುವ ಮರಗಳು ಇವೆ. ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ ಮರಗಳ ಗೆಲ್ಲುಗಳನ್ನು ಕಡಿಯುವ ಬಗ್ಗೆ ಇಂದು ಹೆಬ್ರಿ ತಾಲೂಕು ರೆಡ್ ಕ್ರಾಸ್ ಸೊಸೈಟಿಯ ವತಿಯಿಂದ ಹೆಬ್ರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ನಿಯೋಜಿತ ಚೇರ್ಮನ್ ವೀಣಾ ಆರ್ ಭಟ್, ಕಾರ್ಯದರ್ಶಿ ಪ್ರಶಾಂತ್ ಪೈ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ, ಜನಾರ್ದನ.H, ಪ್ರಸಾದ್ ಶೆಟ್ಟಿ, ಪ್ರದೀಪ್ ಭಟ್, ಉದಯ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.