ವಿಶ್ವ ಕೊಂಕಣಿ ಕೇಂದ್ರವು ವರ್ಧನಿ ಫೆಲೋಶಿಪ್ ಅಡಿಯಲ್ಲಿ “ಗೋವಾದಲ್ಲಿ ಬಂಡೆಯನ್ನು ಕೆತ್ತಿ ನಿರ್ಮಿಸಿದ ಗುಹೆಗಳು
ಕೊಂಕಣಿ ಪರಂಪರೆಯ ಪುರಾತತ್ವ ಅಡಿಪಾಯಗಳ ಅನ್ವೇಷಣೆ ” ಯೆಂಬ ಸಂಶೋಧನಾ ಉಪನ್ಯಾಸ ಕಾರ್ಯಕ್ರಮವನ್ನು, ದಿ. 22-08-2026 ರಂದು ಗೋವಾದ ಇತಿಹಾಸ ತಜ್ಞ ಡಾ. ರೋಹಿತ್ ಫಳಗಾಂವಕಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಇವರು ಗೋವಾದಲ್ಲಿ ಕೊಂಕಣಿ ಪರಂಪರೆಯ ಪುರಾತತ್ವ ಇತಿಹಾಸದ ಅಡಿಪಾಯಗಳ ಗೋವಾದಲ್ಲಿ ಬಂಡೆಯನ್ನು ಕೆತ್ತಿ ನಿರ್ಮಿಸಿದ ಗುಹೆಗಳ ಸಂಶೋಧನಾ ಇತಿಹಾಸದ ಬಗ್ಗೆ ಉಪನ್ಯಾಸ ನೀಡುತ್ತಾ, ಅನಾದಿ ಕಾಲದಿಂದಲೂ ಕೊಂಕಣಿ ಪೂರ್ವಜರ ನಡುವೆ ನಿಚ್ಚಳವಾಗಿರುವ ಪುರಾತತ್ವ ಗುಹೆಯ ಕಲಾ ನಿರ್ಮಾಣ ದ ಬಗ್ಗೆ ಅದರ ಅಮೂರ್ಥ ಕಲ್ಪನೆಗಳು ಅಲ್ಲದೇ ಗುಹೆಗಳಲ್ಲಿ ಮೂಡಿಬಂದಂತಹ ಶಿವಲಿಂಗ ಗಳ ಚಿತ್ರೀಕರಣಗಳ ಸಂಶೋಧನಾ ಅಧ್ಯಯನದ ಬಗ್ಗೆ, ಹಿಂದಿನ ಕಾಲದ ಸಾಂಪ್ರದಾಯಿಕ ಆರಾಧನೆ ನಂಬಿಕೆಗಳ ಕುರಿತು ಶಾಸ್ತ್ರೀಯ ವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ತಮ್ಮ ಪೂರ್ವಜರ ಪುರಾತನ ಕಾಲದಲ್ಲಿ ಇದ್ದಂತಹ ಪುರಾತತ್ವದ ಇತಿಹಾಸಗಳ ಬಗ್ಗೆ, ಗುಹೆಗಳ ರಚನಾತ್ಮಕ ಕಲೆಗಳ ಸಂಶೋಧನಾ ಅಧ್ಯಯನ ಉಪನ್ಯಾಸ ನೀಡಲು ಪ್ರೋತ್ಸಾಹ ನೀಡಿದ ವಿಶ್ವ ಕೊಂಕಣಿ ಕೇಂದ್ರ ಹಾಗೂ ವರ್ಧನಿ ಫೆಲೋಶಿಪ್ ಸಂಸ್ಥೆಯನ್ನು ಅಭಿನಂದಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ ಎ ನಂದಗೋಪಾಲ್ ಶೆಣೈ ಯವರು ಸ್ವಾಗತಿಸಿದರು. ಸುಚಿತ್ರಾ ಎಸ್ ಶೆಣೈ ಇವರು ಅಧ್ಯಯನ ಯೋಜನೆಯ ಸಂಶೋಧಕ ಡಾ ರೋಹಿತ್‍ರ ಸಂಕ್ಷಿಪ್ತ ಪರಿಚಯ ನೀಡಿದರು ಮತ್ತು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ಸಂಧರ್ಭದಲ್ಲಿ ಸಂಶೋಧಕರ ಡಾ. ರೋಹಿತ್ ಫಳಗಾಂವಕಾರ್ ರವರನ್ನು ಕೇಂದ್ರದ ವಿಶ್ವಸ್ಥ ಮಂಡಳಿಯು ಸನ್ಮಾನಿಸಿ ಗೌರವಿಸಿತು. ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ವಿಲಿಯಂ ಡಿಸೋಜಾ, ರಮೇಶ ಡಿ ನಾಯಕ್, ವಿಶ್ವಸ್ಥೆ ಶಕುಂತಲಾ ಆರ್ ಕಿಣಿ ಹಾಗೂ ವರ್ಧನಿ ಸಂಸ್ಥೆಯ ಪ್ರಾಯೋಜಕರಾದ ಉಷಾ ಶೆಣೈ ಮತ್ತು ಇತರ ಕೊಂಕಣಿ ಅಭಿಮಾನಿಗಳು ಉಪಸ್ಥಿತರಿದ್ದರು. ಕೇಂದ್ರದ ವಿಶ್ವಸ್ಥ ಪ್ರಶಾಂತ ಶೇಟ್ ರವರು ವಂದನಾರ್ಪಣೆ ನಡೆಸಿಕೊಟ್ಟರು.

