ಐವನ್ ಡಿ’ಸೋಜಾ ಶಿಫಾರಸ್ಸಿಗೆ ಸ್ಪಂದನೆ : 7 ಅರ್ಜಿದಾರರಿಗೆ ₹5.64 ಲಕ್ಷ ಪರಿಹಾರ ಧನ

0
9

ಮಂಗಳೂರು : ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಏಳು ಮಂದಿ ಅರ್ಜಿದಾರರಿಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು ರೂ.5,64,694/- ಪರಿಹಾರ ಧನವನ್ನು ಬಿಡುಗಡೆ ಮಾಡಲಾಗಿದೆ. ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಅವರ ಶಿಫಾರಸ್ಸಿನ ಮೇರೆಗೆ ಈ ಪರಿಹಾರ ಧನವನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನವೀನ್ ಕೋಟ್ಯಾನ್ ಬೋಳೂರು ಅವರಿಗೆ ರೂ.2,00,000, ಸಾಜಿಯಾ ಮಮ್ತಾಜ್ ಕಣ್ಣೂರು ಅವರಿಗೆ ರೂ.1,92,770, ಉಮ್ಮರ್ ಫಾರೂಕ್ ಪುತ್ತೂರು ಅವರಿಗೆ ರೂ.1,09,700, ಹೇಮಲತಾ ಕಿನ್ನಿಗೋಳಿ ಅವರಿಗೆ ರೂ.27,741, ಜಮೀಲ ಕಣ್ಣೂರು ಅವರಿಗೆ ರೂ.19,324, ಕೃತಿನ್ ಜಿ. ಶೆಟ್ಟಿ ಅವರಿಗೆ ರೂ.8,262 ಹಾಗೂ ಶಕೀನ ಭಾನು ಕಣ್ಣೂರು ಅವರಿಗೆ ರೂ.6,897 ಪರಿಹಾರ ಧನ ಮಂಜೂರಾಗಿದೆ.

ಪರಿಹಾರ ಧನ ಬಿಡುಗಡೆಗೆ ಸಂಬಂಧಿಸಿದ ಪತ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಅವರ ಕಚೇರಿಯಲ್ಲಿ ಅರ್ಜಿದಾರರಿಗೆ ಹಸ್ತಾಂತರಿಸಲಾಯಿತು.

ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಮುಖ್ಯಮಂತ್ರಿ ಪರಿಹಾರ ನಿಧಿಯ ನೆರವು ಸಹಕಾರಿಯಾಗಲಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಈ ಪರಿಹಾರ ಧನದಿಂದ ಹೆಚ್ಚಿನ ನೆರವು ದೊರೆಯಲಿದೆ.

ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ್ ರಾವ್ ಹಾಗೂ ಸತೀಶ್ ಪೆಂಗಲ್, ಕಾಂಗ್ರೆಸ್ ಮುಖಂಡರಾದ ಮನುರಾಜ್ ಎಂ.ಪಿ., ಮೀನಾ ಟೆಲ್ಲಿಸ್, ಇಮ್ರಾನ್ ಎ.ಆರ್., ಹಬೀಬುಲ್ಲಾ ಕಣ್ಣೂರು ಹಾಗೂ ನಾರಾಯಣ ಕೊಟ್ಟ್ಯಾನ್ ಉಪಸ್ಥಿತರಿದ್ದರು.

ವಿಧಾನ ಪರಿಷತ್ ಶಾಸಕರ ಶಿಫಾರಸ್ಸಿನ ಮೂಲಕ ಅರ್ಹ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ನೆರವು ದೊರಕುವಂತೆ ಮಾಡಿರುವ ಕ್ರಮಕ್ಕೆ ಫಲಾನುಭವಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.