ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ : ಡಾ ಚೂಂತಾರು

0
3

ಡಾ.ಚೂಂತಾರ್ ದಂಪತಿಗಳಿಗೆ ಗೌರವ ಸಮರ್ಪಣೆ

ಡಾ. ಮುರಲೀ ಮೋಹನ್ ಚೂಂತಾರ್ ಇವರು – ಘನತೆವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರೆಡ್ ಕ್ರಾಸ್ ರಾಷ್ಟ್ರೀಯ ನಿರ್ವಹಣಾ ಸಮಿತಿ ನವ ದೆಹಲಿ ಇದಕ್ಕೆ ನೇಮಕಗೊಂಡ ಪ್ರಯುಕ್ತ ,ಕನ್ನಡ ಸಾಹಿತ್ಯ ಪರಿಷತ್ ಇದರ ವತಿಯಿಂದ ‘ಸರೋಜಿನಿ’ ಬಾರೆಬೈಲ್ , ಮಂಗಳೂರು ಇಲ್ಲಿ ಕಸಾಪ ಮಂಗಳೂರು ಅಧ್ಯಕ್ಷರಾದ ಮಂಜುನಾಥ ಎಸ್. ರೇವಣ್ಕರ್, ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ಜರುಗಿತು.ಈ ಸಂದರ್ಬದಲ್ಲಿ ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು ಮತ್ತು ಕೋಶಾಧಿಕಾರಿ ಎನ್.ಸುಬ್ರಾಯ ಭಟ್ ಧನ್ಯವಾದ ಸಮರ್ಪಿಸಿದರು.

ಶ್ರೀ ಮಂಜುನಾಥ ರೇವಣ್ಕರ್ ಶುಭ ಹಾರೈಸಿದರು. ಡಾ ರಾಜಶ್ರೀ ಮೋಹನ್,ಕಾರ್ಯಕಾರಿ ಸಮಿತಿ ಸದಸ್ಯರಾದ ಬೆನೆಟ್ ಅಮ್ಮನ್ನ, ಕೃಷ್ಣಪ್ಪ ನಾಯ್ಕ,ಉಷಾಗಣೇಶ್ ಪ್ರಸಾದ್,ರತ್ನಾವತಿ ಬೈಕಾಡಿ,ಶ್ರೀ ನಿಜಗುಣ ದೊಡ್ಡಮನಿ,ಶ್ರೀಕೃಷ್ಣ ಭಟ್ ಚಂಬಲ್ತಿಮಾರ್ ಉಪಸ್ಥಿತರಿದ್ದರು.

ಡಾ ಚೂಂತಾರು ಅವರು ಮಾತನಾಡಿ ಸನ್ಮಾನಗಳು ವ್ಯಕ್ತಿಯನ್ನು ಕಾಲಕಾಲಕ್ಕೆ ಎಚ್ಚರಿಸುತ್ತದೆ ಮತ್ತು ಮತ್ತಷ್ಟು ಜವಾಬ್ದಾರಿ ಹೆಗಲಿಗೇರಿಸಿ ಮತ್ತಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಲು ಪ್ರೇರೇಪಣೆ ನೀಡುತ್ತದೆ ಎಂದು ನುಡಿದರು.