ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ದಸರಾ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಅದರ ಫಲಿತಾಂಶವನನು ತೀರ್ಪುಗಾರರು, ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಪ್ರಥಮ ಬಹುಮಾನ ಶಿವಮೊಗ್ಗದ ರಾಜೇಶ್ವರಿ ಎಸ್.ವಿ., ದ್ವಿತೀಯ ಬಹುಮಾನ ಶಿವಮೊಗ್ಗ ವಿನಾಯಕ ನಗರದ ಲತಾ ಕಶ್ಯಪ್, ತೃತೀಯ ಬಹುಮಾನ ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲ್ಲೂಕಿನ ಮೆಡ್ಲೇರಿಯ ಕುಮಾರಿ ಅಂಜಲಿ ಎಸ್. ಸುಂಕದ, ಸಮಾಧಾನಕರ ಬಹುಮಾನಗಳು ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲ್ಲೂಕಿನ ಮೆಡ್ಲೇರಿಯ ಮಂಗಳ ನಿಂಗಪ್ಪ ಕುರುಡಪ್ಳವರು, ದಾವಣಗೆರೆಯ ಕುಸುಮ ಲೋಕೇಶ್, ದಾವಣಗೆರೆಯ ಹೆಚ್.ಎಸ್.ಪುಷ್ಪಾ ಮಂಜುನಾಥ್, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಧನಂಜಯ ಸಿ.ಎಸ್. ಪಡೆದಿರುತ್ತಾರೆ.
ನವಂಬರ್ 15 ರಂದು ಭಾನುವಾರ ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಬಹುಮಾನ ವಿಜೇತರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆಗಳನ್ನು ದಾವಣಗೆರೆ ಜಿಲ್ಲೆಯ ಅತ್ತಿಗೆರೆಯ ಗ್ರಾಮೀಣ ಪ್ರದೇಶದ ಅಧ್ಯಕ್ಷರಾದ ಶೈಲಜಾ ಪ್ರಶಾಂತ್ ವಿತರಿಸುತ್ತಾರೆ. ಬಹುಮಾನ ವಿಜೇತರು ದಯವಿಟ್ಟು ಈ ಸಮಾರಂಭಕ್ಕೆ ಆಗಮಿಸಿ ಬಹುಮಾನ ಸ್ಮರಣಿಕೆ ಸ್ವೀಕರಿಸಬೇಕಾಗಿ ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.

