ಕಲಾಕುಂಚದ ಕುರಿತು ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆಯ ಫಲಿತಾಂಶ

0
19

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕಲಾಕುಂಚದ ಕುರಿತು ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ ಎಂದು ತೀರ್ಪುಗಾರರು, ಸಾಹಿತಿಗಳು, ಕವಯತ್ರಿಯಾದ ಡಾ|| ಆರತಿ ಸುಂದರೇಶ್ ತಿಳಿಸಿದ್ದಾರೆ.

ಪ್ರಥಮ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರತಿಭಾ ಪ್ರಶಾಂತ್, ದ್ವಿತೀಯ ಬಹುಮಾನ ದಾವಣಗೆರೆಯ ಲತಾ ಕೆ., ತೃತೀಯ ಬಹುಮಾನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಗೀತಾ ಕೊಂಕೋಡಿ, ಸಮಾಧಾನಕರ ಬಹುಮಾನಗಳು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬಿ.ಕೆ.ಸೋದರ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಶೋಭಾ ಇರಂದೂರ್ ಬಿಕ್ಕೆತ್ತುರ ಪಡೆದಿದ್ದಾರೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.

ಯಾವುದೇ ಸಭೆ-ಸಮಾರಂಭಗಳು ಇಲ್ಲದೇ ಈ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅವರವರ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ, ಅಭಿನಂದನಾ ಪತ್ರ ಕಳಿಸುತ್ತೇವೆ. ಕಲಾಕುಂಚದÀ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಬಹುಮಾನ ವಿಜೇತರಿಗೆೆ ಅಭಿಮಾನದಿಂದ ಅಭಿನಂದಿಸಿ ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here