ರಸ್ತೆ ಅಭಿವೃದ್ಧಿಗೆ ಕಾಯಕಲ್ಪ

0
37

ಸಾರ್ವಜನಿಕರ ಮಾಹಿತಿಗಾಗಿ

ರಾಜ್ಯ ಹೆದ್ದಾರಿ : 118ರ ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಪರ್ಕ ರಸ್ತೆಯ ನಿರ್ವಹಣೆ ಕಾಮಗಾರಿಗಾಗಿ ಪ್ರಸ್ತುತ ರೂ.42 ಲಕ್ಷ ಅನುದಾನವನ್ನು ಮಾನ್ಯ ಶಾಸಕರು ನಿಗದಿಪಡಿಸಿದ್ದು ಕುಪ್ಪೆಟ್ಟಿ ಮತ್ತು ಕರಾಯ ಭಾಗದಲ್ಲಿ ಸಂಪೂರ್ಣವಾಗಿ ನಾಶವಾಗಿರುವ ರಸ್ತೆಯ ಭಾಗವನ್ನು ಪುನ‌ರ್ ನಿರ್ಮಾಣ ಮಾಡುವ ಕಾರ್ಯಕ್ಕೆ ಹಾಗೂ ಉಳಿದೆಡೆ ದೊಡ್ಡ ದೊಡ್ಡ ಹೊಂಡಗಳನ್ನು ಮುಚ್ಚುವ ಕಾರ್ಯಕ್ಕೆ ಮಾತ್ರವೇ ಅನುದಾನ ಸೀಮಿತಗೊಂಡಿದ್ದು ಇದನ್ನು ಜೆಡಿ ಸುವರ್ಣ ಸಂಸ್ಥೆಯ ಗುತ್ತಿಗೆದಾರರಿಂದ ನಿರ್ವಹಣೆ ಕಾರ್ಯವನ್ನು ಕೈಗೊಳ್ಳಲಿದ್ದು ಪ್ರಸ್ತುತ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಸದ್ರಿ ರಸ್ತೆ ಕಾರ್ಯವು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ SHDP ಯೋಜನೆಯಡಿ ವಾರ್ಷಿಕವಾಗಿ ಶಾಸಕರುಗಳಿಗೆ ಲಭ್ಯವಾಗುವ ರೂ.12.00ಕೋಟಿ ಅನುದಾನದಲ್ಲಿ ಸಂಪೂರ್ಣ ರೂ.12.00ಕೋಟಿ ಮೊತ್ತವನ್ನು ಕೂಡ ಆದ್ಯತೆಯ ಮೇರೆಗೆ ಇದೇ ರಸ್ತೆಗೆ ಕುಪ್ಪೆಟ್ಟಿ- ಉಪ್ಪಿನಂಗಡಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಈಗಾಗಲೇ ಮಾನ್ಯ ಶಾಸಕರು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಅದರಂತೆ ಮುಂದಿನ ದಿನಗಳಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಮಂಜೂರಾತಿ ದೊರೆತೊಡನೆ ಟೆಂಡ‌ರ್ ಪ್ರಕ್ರಿಯೆಗಳನ್ನು ಮುಗಿಸಿ ಸುಸಜ್ಜಿತ ರಸ್ತೆಯು ನಿರ್ಮಾಣಗೊಳ್ಳಲಿದೆ ಈ ವಿಷಯವನ್ನು ಸಾರ್ವಜನಿಕರು ಹಾಗೂ ವಾಹನ ಸವಾರರ ಮಾಹಿತಿಗಾಗಿ ನೀಡಲಾಗಿದೆ.

LEAVE A REPLY

Please enter your comment!
Please enter your name here