ಪುತ್ತಿಗೆಗುತ್ತು ಕಡಂದಲೆ ಪರಾಡಿಯಲ್ಲಿ ಭತ್ತದ ಕೃಷಿ ಪ್ರಾತ್ಯಕ್ಷಿಕೆ

0
100

ಮೂಡುಬಿದಿರೆ: ಮಂಗಳೂರು ಕದ್ರಿ ಚಿನ್ಮಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಪುತ್ತಿಗೆಗುತ್ತು ಕಡಂದಲೆ ಪರಾಡಿಯಲ್ಲಿ ಶುಕ್ರವಾರ ನಡೆಯಿತು.
ಗುತ್ತಿನ ಯಜಮಾನ ಕೆ.ಪಿ ಸಂತೋಷ್ ಕುಮಾರ್ ಎಂ.ಶೆಟ್ಟಿ ಪ್ರಾರ್ಥನೆ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮ ಗುತ್ತಿಗೆ ಸೇರಿದ ಸುಮಾರು 60 ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷವು ಭತ್ತದ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ. ವರ್ಷಕ್ಕೆ ಮೂರು ಬಾರಿ ಭತ್ತದ ಬೆಳೆ ಬೆಳೆಯುತ್ತೇವೆ. ಹೆಚ್ಚಿನ ಕಡೆ ತೋಟಗಾರಿಕ ಬೆಳೆಗೆ ಆಧ್ಯತೆ ನೀಡಲಾಗುತ್ತಿದ್ದರೂ, ನಾವು ಭತ್ತಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದು, ಜಿಲ್ಲೆಯಲ್ಲೇ ಅತೀ ಹೆಚ್ಚು ಭತ್ತ ಬೆಳೆಯುವ ಕೃಷಿಕರೆನ್ನುವ ಹೆಸರು ಪಡೆದಿದ್ದೇವೆ. ನೂರಕ್ಕೂ ಅಧಿಕ ಕೃಷಿ ಕಾರ್ಮಿಕರಿಗೆ ದುಡಿಮೆಯ ಅವಕಾಶವನ್ನೂ ನೀಡಿದ್ದೇವೆ. ನಗರದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡವ ಅವಕಾಶ ದೊರೆತ್ತಿರುವುದು ಸಂತಸದ ವಿಷಯ ಎಂದರು.

ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಪುತ್ತಿಗೆಗುತ್ತು ಕಡಂದಲೆ ಪರಾಡಿ ಕೂಡು ಕುಟುಂಬ ದೈವ ಹಾಗೂ ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಬೆಳೆಯುತ್ತಿರುವ ಪ್ರತಿಷ್ಠಿತ ಮನೆತನ ಎಂದರು.
ಶಾಲೆಯ ವತಿಯಿಂದ ಕೆ.ಪಿ ಸಂತೋಷ್ ಕುಮಾರ್ ಎಂ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.


ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್, ಶಿಕ್ಷಕಿಯರಾದ ಶೋಭಾ ಭಟ್, ಜಯಲಕ್ಷ್ಮೀ ವನಜಾ, ವಿದ್ಯಾರ್ಥಿ ಪೋಷಕರಾದ ರಾಕೇಶ್ ಕುಮಾರ್, ದಿವ್ಯಶ್ರೀ ರಾಕೇಶ್ ಉಪಸ್ಥಿತರಿದ್ದರು.
ಶಾಲೆ 38 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಟಿ ಮಾಡಿದರು. 100 ಅಧಿಕ ಕೃಷಿ ಕಾರ್ಮಿಕರು ಇದ್ದರು.

ವರದಿ: ಜಗದೀಶ ಪೂಜಾರಿ  ಕಡಂದಲೆ

LEAVE A REPLY

Please enter your comment!
Please enter your name here