ವಿಧಾನಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರ ಪ್ರದೇಶಾಭಿವೃದ್ದಿ ನಿಧಿಯಿಂದ ಅತ್ತಾವರದಲ್ಲಿ  ರಿಕ್ಷಾ ಪಾರ್ಕ್‌ ಉದ್ಘಾಟನೆ

0
15

ಮಂಗಳೂರು ಮಹಾನಗರ ವ್ಯಾಪ್ತಿಯ ಅತ್ತಾವರದ  ದ.ಕ.ಜಿ.ಪಂ ಸರಕಾರಿ ಶಾಲೆಯ  ಹತ್ತಿರ ಅತ್ಯಂತ ಸುಸಜ್ಜಿತವಾದ ರಿಕ್ಷಾ ನಿಲ್ದಾಣವನ್ನು ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ವಿಧಾನ ಪರಿಷತ್‌ ಶಾಸಕರಾದ ಶ್ರೀ ಮಂಜುನಾಥ ಭಂಡಾರಿಯವರು ಉದ್ಘಾಟಿಸಿದರು ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಐವನ್‌ ಡಿʼಸೋಜಾರವರು ರಿಕ್ಷಾ ಚಾಲಕರು ಸಮಾಜದ ರಾಯಭಾರಿಗಳಾಗಿದ್ದು ಸಮಾಜದಲ್ಲಿ ನಡೆಯುವ ಏಲ್ಲಾ ಆಗು-ಹೋಗುಗಳಿಗೆ ತಮ್ಮದೇ ಅದ ಪಾತ್ರವಹಿಸಿದ್ಧಾರೆ. ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸರಕಾರ ಒತ್ತು ನೀಡಿದೆ. ಇವತ್ತು ಸಮಾಜದಲ್ಲಿ ಉತ್ತಮ ಜೀವನ ನಡೆಸುವಲ್ಲಿ  ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿಗಳು ತುಂಬಾ ಉಪಯುಕ್ತವಾಗಿದೆ.

 ರಿಕ್ಷಾ ಚಾಲಕರಿಗೆ ಹೊಸಹೊಸ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಐವನ್‌ ಡಿಸೋಜಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯವರಾದ ಆರ್.‌ ಪದ್ಮರಾಜ್‌ ಪೂಜಾರಿಯವರು ಮಾತನಾಡಿ ಸಮಾಜದಲ್ಲಿ ಎಲ್ಲಾರೂ ಒಟ್ಟಾಗಿ ಒಳ್ಳೆಯ ಕೆಲಸವನ್ನು ಬೆಂಬಲಿಸಬೇಕು ಏಲ್ಲಾರು ಶಾಂತಿಯ ತೋಟವನ್ನು ನಿರ್ಮಿಸುವ ಕೆಲಸವನ್ನು ಮಾಡಬೇಕು ಜಾತಿ ಮತ ಬೇಧವಿಲ್ಲದೇ ಒಳ್ಳೆಯ ಕೆಲಸವನ್ನು ಬೆಂಬಲಿಸುವ ಪ್ರವೃತ್ತಿ ನಮ್ಮ ಸಮಾಜದಲ್ಲಿ ಬರಬೇಕು ಮತ್ತು ರಿಕ್ಷಾ ಚಾಲಕರು ಇಂತಹ ಕೆಲಸವನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೋರೇಟರ್ ನಾಗೇಂದ್ರ ಕುಮಾರ್ ಜೆಪ್ಪಿನಮೊಗರು, ಅಪ್ಪಿಲತ, ಸಬಿತ ಮಿಸ್ಕಿತ್, ಸತೀಶ್ ಪೆಂಗಲ್, ಶೈಲಜಾ, ವಿಜಯಲಕ್ಷ್ಮಿ, ಪ್ರೇಮ್ ಬಲ್ಲಾಲ್ಬಾಗ್, ಭಾಸ್ಕರ್ ರಾವ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ ನಾಯಕರುಗಳಾದ, ವಸಂತ್ ಶೆಟ್ಟಿ ವೀರನಗರ, ಮನೀಶ್ ಬೋಳಾರ್, ಮನುರಾಜ್, ಸೋಹನ್ ಎಸ್.ಕೆ., ಇಮ್ರಾನ್ ಏ.ಆರ್, ಮೀನಾ ಟೆಲ್ಲೀಸ್, ನೀತು, ವಿದ್ಯಾ ಅತ್ತಾವರ, ಪ್ರವೀಣ್ ಜೇಮ್ಸ್ ಗೀತಾ ಅತ್ತಾವರ, ನಮಿತಾ ರಾವ್ ಚಂದ್ರಕಲಾ ಜೋಗಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here