ಐವನ್‌ ಡಿʼಸೋಜಾರವರ ಪ್ರದೇಶಾಭಿವೃದ್ದಿ ನಿಧಿಯಿಂದ ಹಂಪನಕಟ್ಟೆಯ ತಾಜ್‌ ಮಹಲ್‌ ಬಳಿ  ರಿಕ್ಷಾಪಾರ್ಕ್‌ ಉದ್ಘಾಟನೆ

0
15

ಮಂಗಳೂರು: ವಿಧಾನ ಪರಿಷ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾರವರ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಿಂದ ಮಂಗಳೂರಿನ ಹಂಪನಕಟ್ಟೆಯ ತಾಜ್‌ ಮಹಲ್‌ ಬಳಿ  ಸುಸಜ್ಜಿತವಾದ ರಿಕ್ಷಾ ನಿಲ್ದಾಣವನ್ನು ನಿರ್ಮಿಸಲಾಗಿದ್ದು ಇದರ ಉದ್ಘಾಟನೆಯನ್ನು ಎಂ.ಎಲ್‌.ಸಿ ಮಂಜುನಾಥ ಭಂಡಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಐವನ್‌ ಡಿʼಸೋಜಾರವರು ರಿಕ್ಷಾ ಚಾಲಕರಿಗೆ ಮೇಲ್ಛಾವಣಿ ಹಾಕುವುದರ ಮೂಲಕ ರಾಜ್ಯದಲ್ಲಿಯೇ 2014ರಲ್ಲಿಸರ್ಕಾರದ ಗಮನಕ್ಕೆ ತಂದು ವಿಧಾನಪರಿಷತ್‌ ನಲ್ಲಿ ಚರ್ಚೆ ಮಾಡಿದ ಫಲವಾಗಿ ಅಂದಿನ ಮಂತ್ರಿಗಳಾಗಿದ್ದ ಎಸ್ ಆರ್‌ ಪಾಟೀಲ್‌ರವರು ರಿಕ್ಷಾ ಮೇಲ್ಛಾವಣಿ ಘಟಕಕ್ಕೆ ಅನುದಾನವನ್ನು ನೀಡಬಹುದು ಎಂದೂ ಪ್ರದೇಶಾಭಿವೃದ್ದಿ ಕಾಮಗಾರಿಗೆ ಸೇರಿಸಿಕೊಳ್ಳಬಹುದು ಎಂದೂ, ಇದರಿಂದ ರಿಕ್ಷಾ ಚಾಲಕರಿಗೆ ಮೇಲ್ಛಾವಣಿ ಅಳವಡಿಸಬಹುದೆಂದು ಜಾರಿಗೆ ತರಲಾಯಿತು ಎಂದು ತಿಳಿಸಿದರು.

ರಿಕ್ಷಾ ಚಾಲಕರು ಸಮಾಜದ ರಾಯಭಾರಿಗಳಾಗಿದ್ದು, ಸಮಾಜದಲ್ಲಿ ನಡೆಯುವ ಏಲ್ಲಾ ಆಗು-ಹೋಗುಗಳಿಗೆ ತಮ್ಮದೇ ಅದ ಪಾತ್ರವಹಿಸಿದ್ಧಾರೆ. ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸರಕಾರ ಒತ್ತು ನೀಡಿದೆ.

ಈ ಸಂದರ್ಭದಲ್ಲಿ ಮಂಜುನಾಥ ಭಂಡಾರಿಯವರು ಮಾತನಾಡಿ ರಿಕ್ಷಾ ತಂಗುದಾಣಗಳಿಗೆ ಸರಕಾರದಿಂದ ಅನುದಾನ ಒದಗಿಸಿಕೊಡುವಂತಹುದು ಉತ್ತಮ ಕೆಲಸ ಎಂದು ನುಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ, ಮಾಜಿ ಕಾರ್ಪೋರೇಟರ್, ಅಪ್ಪಿಲತ, ಸಬಿತ ಮಿಸ್ಕಿತ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಲ್ಬಾಗ್, ಹೇಮಂತ್ ಗರೋಡಿ, ಭಾಸ್ಕರ್ ರಾವ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ ನಾಯಕರುಗಳಾದ, ವಸಂತ್ ಶೆಟ್ಟಿ ವೀರನಗರ, ಗಣೇಶ್, ಮನೀಶ್ ಬೋಳಾರ್, ಮನುರಾಜ್, ಸೋಹನ್ ಎಸ್.ಕೆ, ಇಮ್ರಾನ್ ಏ.ಆರ್, ಮೀನಾ ಟೆಲ್ಲೀಸ್,  ವಿದ್ಯಾ ಅತ್ತಾವರ, ಪ್ರವೀಣ್ ಜೇಮ್ಸ್, ಶಾಂತಲಾ ಗಟ್ಟಿ, ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಗೀತಾ ಅತ್ತಾವರ, ನಮಿತಾ ರಾವ್ ಚಂದ್ರಕಲಾ ಜೋಗಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here