ಮಂಗಳೂರು ಡಿ. 12 : ರೋಟರಿ ಅಂತರಾಷ್ಷ್ರಿಯ ಜಿಲ್ಲಾ 3181 ರ ಆಡಳಳಿತ ಸಮಿತಿ ಮತ್ತು ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆ ಯ ಜಂಟಿ ಆಶ್ರಯದಲ್ಲಿ “ರೋಟರಿ ನಿಧಿ ಶೋಧನೆ ಸ್ಪರ್ಧಾ ಕೂಟ” ವನ್ನು ನಗರದ ಪಡಿಲ್ ಪ್ರದೇಶಲ್ಲಿ ಕಾರ್ಯವರಿಸುತ್ತಿರುವ ವರ್ಷಾ ಹೌಸ್, ಬಿ.ಎಮ್ ಡಬ್ಲ್ಯೂ ಮೋಟರ್ ವಾಹನದ ಮಾರಾಟ ಮಳಿಗೆಯ ಆವರಣದಲ್ಲಿ ರವಿವಾರ ತಾ: 14.-12-2025 ರಂದು ಬೆಳಿಗ್ಗೆ
08:00 ಗಂಟೆಗೆ ಆಯೋಜಿಸಲಾಗಿದೆ. ಈ ಸ್ಪರ್ಧಾಕೂಟವನ್ನು ರೋಟರಿ ಅಂತರಾಷ್ಷ್ರಿಯ ಜಿಲ್ಲಾ 3181 ರ ಚುನಾಯಿತ ಗವರ್ನರ್‌ರಾದ ರೋ. ಸತೀಶ್ ಬೋಳಾರ್ ರವರು ಉದ್ಘಾಟಿಸಲಿರುವರು.
ಈ ಸ್ಪರ್ಧಾಕೂಟದಲ್ಲಿ ಸುಮಾರು 50 ಮೋಟರ್ ವಾಹನಗಳು ಮತ್ತು 200 ಸ್ಪರ್ಧಾಳುಗಳು 2 ಗಂಟೆಯ ಅವದಿಯ 17 ಕಿ.ಮೀ.ಪಯಾಣವನ್ನು ಬೆಳೆಸಿ ನಿಧಿ ಶೋಧನೆಯನ್ನು ಮಾಡಲಿರುವರು. ಪುರುಷರ ಮತ್ತು ಮಹಿಳೆಯವರ 2 ಪ್ರತ್ಯೇಕ ತಂಡಗಳು ಈ ಸ್ಪರ್ಧಾಕೂಟದಲ್ಲಿ ಭಾಗವಹಿಸಲಿವೆ. ಈ ಸ್ಪರ್ಧಾಕೂಟವನ್ನು ರೋ. ಸುಮಿತ್ ರಾವ್ (98450 82403) ಸಂಘಟಿಸಿದ್ದಾರೆ. ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ , ಪ್ರಮಾಣ ಪತ್ರ , ನಗದು ಬಹುಮಾನವನ್ನು ನೀಡಲಾಗುವುದು. ಈ ಸ್ಪರ್ಧಾಕೂಟವನ್ನು ವರ್ಷಾ ಹೌಸ್ ಮತ್ತು ಇಝುಝು ಸಂಸ್ಥೆ ಪ್ರಾಯೋಜಿಸಿದೆ. ಈ ಸ್ಪರ್ಧಾಕೂಟದಿಂದ ಬಂದ ಆದಾಯವನ್ನು
ಮಕ್ಕಳ ಕರುಳಿನ ಅರ್ಬುದ ರೋಗ ಚಿಕಿತ್ಸೆಗೆ ವಿನಿಯೋಗಿಸಲಾಗುವುದು ಎಂದು ರೋಟರಿ ಕ್ಲಬ್‌ನ ಅಧ್ಯಕ್ಷೆ ರೋ. ಸುಜ್ನಾ ಬಾಸ್ಕರ್ ಮಾಹಿತಿ ನೀಡಿದ್ದಾರೆ.
(ಎಮ್.ವಿ. ಮಲ್ಯ)
ವರಿದಿಗಾರರು
98440 40927, 95916 71310
