ಮುಲ್ಕಿ, ಸಾಧಕರ ಅರಸು ಕಂಬಳ ಪ್ರಶಸ್ತಿ 2025 ರಲ್ಲ ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ ಪ್ರಕಟ

0
106

ಮುಲ್ಕಿ ಸೀಮೆಯ ಅರಸು ಕಂಬಳದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತೀ ವರ್ಷ ಕೊಡಮಾಡುವ ಅರಸು ಪ್ರಶಸ್ತಿ 2025 ಪ್ರಕಟವಾಗಿದೆ. ಮುಲ್ಕಿ ಸೀಮೆಯ 9 ಮಾಗಣೆಯ ಸಾಧಕರು ಮತ್ತು ಕೂಟದವರನ್ನು ಗುರುತಿಸಿ ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಸೊಸೈಟಿ ಕೂಡಿ ಪ್ರಶಸ್ತಿ ಕೊಡುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮುಲ್ಕಿಯ ‘ಹೊಸ ಆಂಗಣ’ ಪತ್ರಿಕೆಯ ಸಂಪಾದಕ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ರವರು ಪ್ರಸ್ತುತ ವರ್ಷದ ಸಾಹಿತ್ಯ ಕ್ಷೇತ್ರ ಪ್ರಶಸ್ತಿ 2025ಗೆ ಭಾಗಿಯಾಗಿದ್ದಾರೆ. ಡಾ. ಸಾಲ್ಯಾನ್ ರವರು ಪರಿಸರದ ಓರ್ವ ಹಿರಿಯ ಹಾಗೂ ಶ್ರೇಷ್ಠ ಲೇಖಕರಿಗಿದ್ದು ಜ್ಯೋತಿಷ್ಯ ಹಾಗೂ ವಾಸ್ತು ತಜ್ಞರೂ ಆಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿದ್ದಾರೆ. ಕೆಲವು ಕೃತಿಗಳನ್ನು ಮರುಮುದ್ರಣವನ್ನೂ ಕಂಡಿವೆ.ಇವರ ಅದೆಷ್ಟೋ ಲೇಖನಗಳು ಊರಿನ ಪ್ರಸಿದ್ಧ ಪತ್ರಿಕೆಗಳಾದ ವಿಜಯಾ ಕರ್ನಾಟಕ, ಕನ್ನಡ ಪ್ರಭ, ಜಯಕಿರಣ, ಆತ್ಮ ಶಕ್ತಿ, ಜ್ಯೋತಿಷ್ಯ ಮಂಡಳಿ, ತ್ರಿಕಣ್ಣೇಶ್ವರಿ ಅಲ್ಲದೆ ಮುಂಬಯಿಯ ಕರ್ನಾಟಕ ಮಲ್ಲ, ಅಕ್ಷಯ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಬಿರುದುಗಳು ಇವರ ಮಡಿಲು ಸೇರಿವೆ. ಈ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ.28ರ ಅರಸು ಕಂಬಳದ ದಿನದಂದು ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾಮಂತರ ಮಾರ್ಗದರ್ಶನದಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಲಿದೆ ಎಂದು ಟ್ರಸ್ಟಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here