ಮುಂಡ್ಕೂರು: ಸಚ್ಚೇರಿಪೇಟೆಯ ಗಾಂಧಿ ಮೈದಾನ ಇಡೀ ಮುಂಡ್ಕೂರು ಗ್ರಾಮ ಪಂಚಾಯತ್ ನಲ್ಲಿ ಒಂದು ಪ್ರಮುಖ ಮೈದಾನವಾಗಿದ್ದು. ವರ್ಷದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳು ನಡೆಯುವ ಮೈದಾನವಾಗಿದೆ. ಮೈದಾನ ಅಭಿವೃದ್ದಿ ಮಾಡಲು ಸರಕಾರದ 2 ಲಕ್ಷ ಅನುದಾನ ಬಂದಿದ್ದು, ಕಾಂಟ್ರಾಕ್ಟ್ ನವರು ಕಳಪೆ ಕಾಮಗಾರಿ ಮಾಡಿ ಮತ್ತು ಮುಂಡ್ಕೂರು ಗ್ರಾಮ ಪಂಚಾಯಿತಿನ ಬೇಜವಾಬ್ದಾರಿ ತನದಿಂದ ಊರಿನ ಜನರಿಗೆ ಮತ್ತು ವಾಹನಗಳಿಗೆ ಗ್ರೌಂಡ್ ನಲ್ಲಿ ಹಾದು ಹೋಗಲು ಮತ್ತು ಕ್ರೀಡಾ ಕೂಟ ನಡೆಸಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅಸಾಧ್ಯವಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಸ್ವಾತಂತ್ರ್ಯ ಮಹೋತ್ಸವ ,ಗಣೇಶೋತ್ಸವ, ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚ್ಚೇರಿ ಪೇಟೆಯ ಗಾಂಧಿ ಮೈದಾನ ಅತಿ ಅಗತ್ಯವಾಗಿದೆ. ಗಾಂಧಿ ಮೈದಾನ ಉಳಿಸುವ ಬಗ್ಗೆ ಅಭಿಯಾನ ಕೈಗೊಂಡು ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮತ್ತು ಕ್ರೀಡಾಕೂಟಗಳನ್ನು ನಡೆಸುವ ಸಂಘ ಸಂಸ್ಥೆಗಳು, ಸಚ್ಚೇರಿ ಪೇಟೆ ನಾಗರಿಕರು ಸೇರಿ ಪ್ರತಿಭಟನೆ ನಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ವರದಿ: ಜಗದೀಶ್ ಕಡಂದಲೆ