ಜೆಸಿಐ ಇಂಡಿಯಾ ವಲಯ 15 ರ ಅಭಿವೃದ್ಧಿ ಮತ್ತು ಬೆಳವಣಿಗೆಯ ವ್ಯವಹಾರ ಸಮ್ಮೇಳನ( G&D) ಅದ್ದೂರಿ ಮೃದಿನಿ ಕಾರ್ಯಕ್ರಮವು ದ.ಕದ ಮಡಂತ್ಯಾರುನ ಚರ್ಚ್ ಸಭಾಭವನದಲ್ಲಿ ಆಗಸ್ಟ್ 23 ರಂದು ಆದಿತ್ಯವಾರ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಸ್ಯರಿಗೆ ಗೌರವ ಪ್ರಶಸ್ತಿ ಮನ್ನಣೆ ನೀಡಲಾಗಿದ್ದು, 2026ರ ಸಾಧನಶ್ರೀ ಪ್ರಶಸ್ತಿಯನ್ನು ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಉಮೇಶ್ ಆಚಾರ್ಯ ಇವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2026ರ ಸಾಧನ ಶ್ರೀ ಪ್ರಶಸ್ತಿಯನ್ನು ವಲಯ15ರ ಅಧ್ಯಕ್ಷರಾದ ಜೆಸಿ ಸಂತೋಷ್ ಶೆಟ್ಟಿ ನೀಡಿ ಗೌರವಿಸಿದರು. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಘಟಕದ ಅಧ್ಯಕ್ಷರಾದ ಜೆಸಿ ಭರತ್ ಕುಮಾರ್ ಉಪಸ್ಥಿತರಿದ್ದರು.ಜೆಸಿಐ ಮಡಂತ್ಯಾರು ಘಟಕ ಈ ಸಮ್ಮೇಳನದ ಜವಾಬ್ದಾರಿ ವಹಿಸಿತ್ತು.

