ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜು ತುಳು ಸಾಹಿತ್ಯ ಸಂಘ ಹಾಗೂ ತುಳುವ ಮಹಾಸಭೆ ಪುತ್ತೂರು ತಾಲೂಕು ಆಶ್ರಯದಲ್ಲಿ ಆಟಿದ ಲೇಸ್ ʻಮಂದಾರ ರಾಮಾಯಣ – ಅಜ್ಜೆರೆ ಸಾಲೆ ಸುಗಿಪು ದುನಿಪು ಕಾರ್ಯಕ್ರಮವು ಆ. ೧೬ರಂದು ಬೆಳಿಗ್ಗೆ ೧೦.೧೫ರಿಂದ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಲಿದೆ.
ಕಾಲೇಜಿನ ಪ್ರಾಚಾರ್ಯರಾದ ರೆ.ಡಾ. ಆಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಜೇಶ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ತುಳು ವರ್ಲ್ಡ್ ಫಂಡೇಶನ್ ನ ಉಪಾಧ್ಯಕ್ಷ ಡಾ. ನಿರಂಜನ ರೈ ಭಾಗವಹಿಸಲಿದ್ದಾರೆ. ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವೆಂಕಟರಮಣ ಭಟ್ ಉಪನ್ಯಾಸ ನೀಡಲಿದ್ದಾರೆ.

